ETV Bharat / state

ಶಿವಮೊಗ್ಗ: ಟ್ರಂಚ್​ಗೆ ಬಿದ್ದು ಕಾಡಾನೆ ಸಾವು - ಕಳ್ಳ ಸಾಗಣೆದಾರನಿಂದ ಚಿರತೆಯ 16 ಉಗುರು, 3 ಹಲ್ಲು ವಶಕ್ಕೆ

ಆಯನೂರು ಸಮೀಪದ ಅರಕೆರೆ ಅರಣ್ಯ ವಿಭಾಗದಲ್ಲಿ ಆನೆ ಟ್ರಂಚ್​ನಲ್ಲಿ ಬಿದ್ದು ಕಾಡಾನೆಯೊಂದು ಸಾವನ್ನಪ್ಪಿದೆ. ಇನ್ನೊಂದೆಡೆ ಚಿರತೆ ಉಗುರು, ಹಲ್ಲು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅರಣ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಕಾಡಾನೆ ಸಾವು - ಚಿರತೆಯ ಉಗುರು, ಹಲ್ಲು ವಶಕ್ಕೆ
ಕಾಡಾನೆ ಸಾವು - ಚಿರತೆಯ ಉಗುರು, ಹಲ್ಲು ವಶಕ್ಕೆ (ETV Bharat)
author img

By ETV Bharat Karnataka Team

Published : Nov 5, 2024, 6:17 PM IST

ಶಿವಮೊಗ್ಗ: ಶಿವಮೊಗ್ಗ ತಾಲೂಕು ಆಯನೂರು ಸಮೀಪದ ಅರಕೆರೆ ಅರಣ್ಯ ವಿಭಾಗದಲ್ಲಿ ಆನೆಗಳಿಗಾಗಿಯೇ ತೆಗೆದಿರುವ ಟ್ರಂಚ್​ನಲ್ಲಿ ಬಿದ್ದು ಕಾಡಾನೆಯೊಂದು ಸಾವನ್ನಪ್ಪಿದೆ. ಎರಡು ದಿನದ ಹಿಂದೆಯೇ ಆನೆ ಬಿದ್ದು ಸಾವನ್ನಪ್ಪಿದೆ ಎನ್ನಲಾಗುತ್ತಿದೆ.

ಟ್ರಂಚ್​​ನಲ್ಲಿ ಬಿದ್ದಿರುವ ಆನೆ ಮೇಲಕ್ಕ ಏಳಲು ಆಗದೆ ಹಾಗೆಯೇ ಬಿದ್ದು ಸತ್ತಿರುವ ಶಂಕೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಕಾಡಾನೆಗಳು ಪುರದಾಳು ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ರೈತರ ಜಮೀನಿಗೆ ನುಗ್ಗಿ ಬೆಳೆ‌ ನಾಶವನ್ನುಂಟು ಮಾಡುತ್ತಿದ್ದವು. ಈ ಬಗ್ಗೆ ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕುತ್ತಿದ್ದರು.‌ ಈ ಮಧ್ಯೆ ಒಂದೆರಡು ದಿನ ಆನೆ ಹಿಡಿಯಲು ಸಕ್ರೆಬೈಲಿನ ಎರಡು ಆನೆಗಳನ್ನು ತರಲಾಗಿತ್ತು. ಆದರೆ ಕಾಡಾನೆಗಳ ಸುಳಿವು ಸಿಕ್ಕಿರಲಿಲ್ಲ.

ಪೋಸ್ಟ್​​ ಮಾರ್ಟಮ್​ ಬಳಿಕ ತಿಳಿಯಲಿದೆ ಸಾವಿನ ರಹಸ್ಯ ; ಈ ಕುರಿತು ವನ್ಯಜೀವಿ ಅರಣ್ಯ ವಿಭಾಗದ ಡಿಎಫ್​​ಒ ಪ್ರಸನ್ನ ಪಟಗಾರ್ ಅವರು ಈಟಿವಿ ಭಾರತ ಕನ್ನಡ ಜೊತೆ ಮಾತನಾಡಿ, ಆನೆಯು ಅರಣ್ಯದಂಚಿನ ಟ್ರಂಚ್​​ನಲ್ಲಿ ಬಿದ್ದು ಸಾವನ್ನಪ್ಪಿದೆ. ಆನೆಗಳು ಪುರದಾಳು ಸುತ್ತಮುತ್ತ ಬೆಳೆ ನಾಶ ಮಾಡುತ್ತಿದ್ದವು.‌ ಆದರೆ ಈ ಭಾಗದಲ್ಲಿ ಆನೆಗಳು‌ ಓಡಾಡಿದ ಬಗ್ಗೆ ನಮಗೆ ಮಾಹಿತಿ‌ ಇರಲಿಲ್ಲ. ಆನೆಯು ಸುಮಾರು 36 ವರ್ಷದ್ದು ಎಂದು‌ ಅಂದಾಜಿಸಲಾಗಿದೆ.‌ ಯಾವ ಕಾರಣಕ್ಕೆ ಆನೆ ಸತ್ತಿದೆ ಅನ್ನೋದು ಪೋಸ್ಟ್ ಮಾರ್ಟಮ್ ಮಾಡಿದ ನಂತರವೇ ತಿಳಿದು ಬರಲಿದೆ ಎಂದು ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಇದೇ ಭಾಗದಲ್ಲಿ ಎರಡು ಕಾಡಾನೆಗಳು ಜಮೀನಿಗೆ ಹಾಕಿದ ವಿದ್ಯುತ್ ತಂತಿ ಬೇಲಿಯ ಶಾಕ್ ತಗುಲಿ ಸಾವನ್ನಪ್ಪಿದ್ದವು.

ಚಿರತೆ ಉಗುರು, ಹಲ್ಲು ವಶ: ಆರೋಪಿ ಬಂಧನ

ಚಿರತೆಯ ಉಗುರು ಹಾಗೂ ಹಲ್ಲುಗಳನ್ನು ಸಾಗಣೆ ಮಾಡುತ್ತಿದ್ದ ಓರ್ವ ಆರೋಪಿಯನ್ನು ಅರಣ್ಯ ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ಸಾಗರ ತಾಲೂಕು ಆನಂದಪುರಂ ಸಂಇಪದ ದಾಸನಕೊಪ್ಪ ವೃತ್ತದ ಪೆಟ್ರೋಲ್ ಬಂಕ್ ಬಳಿ ಲೋಕೇಶ್ ಎಂಬಾತನನ್ನು ಬಂಧಿಸಲಾಗಿದೆ. ಲೋಕೇಶ್ ಶಿಕಾರಿಪುರ ತಾಲೂಕು ಹಾರೂಗೊಪ್ಪದ ನಿವಾಸಿ ಎಂದು ತಿಳಿದು ಬಂದಿದೆ.

ಕಳ್ಳ ಸಾಗಣೆದಾರನಿಂದ ಚಿರತೆಯ 16 ಉಗುರು, 3 ಹಲ್ಲು ವಶಕ್ಕೆ
ಕಳ್ಳ ಸಾಗಣೆದಾರನಿಂದ ಚಿರತೆಯ 16 ಉಗುರು, 3 ಹಲ್ಲು ವಶಕ್ಕೆ (ETV Bharat)

ಅರಣ್ಯ ಸಂಚಾರಿ ಪೊಲೀಸರು ಲೋಕೇಶ್​​ನನ್ನು ಬಂಧಿಸಿದ ವೇಳೆ ಈತನ ಬಳಿ ಚಿರತೆಯ 16 ಉಗುರು ಹಾಗೂ 3 ಹಲ್ಲುಗಳು ಪತ್ತೆಯಾಗಿವೆ. ಅರಣ್ಯ ಘಟಕದ ಸಿಐಡಿ ವಿಭಾಗದ ಎಸ್ಪಿ ಎಸ್.ಎಸ್. ಕಾಶಿ ಅವರ ಮಾರ್ಗದರ್ಶನದಲ್ಲಿ ಅರಣ್ಯ ಸಂಚಾರಿ ಪೊಲೀಸ್ ದಳದ ವಿನಾಯಕ್ ನೇತೃತ್ವದಲ್ಲಿ ದಾಳಿ ನಡೆಸಿ, ಆರೋಪಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಬಿಳಿಗಿರಿರಂಗನ ಬೆಟ್ಟದಲ್ಲಿ ಓಡಾಡುತ್ತಿದ್ದ ಕೂಡುದಂತದ ಕಾಡಾನೆ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.