ಬೀಜಿಂಗ್(ಚೀನಾ): ರಾತ್ರಿ ವೇಳೆ ಮಲಗುವ ಮುನ್ನ ಮಹಿಳೆಯೊಬ್ಬರು ತನ್ನ ಐಫೋನ್ ಚಾರ್ಜ್‌ಗಿಟ್ಟಿದ್ದರು. ಬೆಳಗ್ಗೆ ಫೋನ್ ಸ್ಫೋಟಗೊಂಡಿದ್ದು, ಆಕೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಮಂಗಳವಾರ ಬೆಳಗ್ಗೆ ಚೀನಾದ ಶಾಂಕ್ಸಿಯಲ್ಲಿ ನಡೆದಿದೆ. ಈ ಸುದ್ದಿ ಚೀನಾದಾದ್ಯಂತ ಸಂಚಲನ ಮೂಡಿಸಿದ ಬಳಿಕ ಆ್ಯಪಲ್ ಕಂಪನಿ ಆತಂಕ ವ್ಯಕ್ತಪಡಿಸಿದೆ. ಐಫೋನ್ ಸ್ಫೋಟದ ಬಗ್ಗೆ ತಿಳಿಯಲು ಆ ಸಾಧನವನ್ನು ಹತ್ತಿರದ ಆ್ಯಪಲ್ ಕಸ್ಟಮರ್ ಕೇರ್ಗೆ ತೆಗೆದುಕೊಂಡು ಹೋಗಲಾಗಿದೆ.
ಅಪಘಾತ ಸಂಭವಿಸಿದ್ದು ಹೇಗೆ?:
- ವರದಿಗಳ ಪ್ರಕಾರ, ಮಹಿಳೆ ಮಲಗುವ ಮುನ್ನ ಐಫೋನ್ ಚಾರ್ಜ್ಗೆ ಇಟ್ಟಿದ್ದರು. ರಾತ್ರಿ ಮಲಗಿದ್ದಾಗ ಆಕಸ್ಮಿಕವಾಗಿ ಐಫೋನ್ 14 ಪ್ರೊ ಮ್ಯಾಕ್ಸ್ ಮೇಲೆ ಕೈ ಹಾಕಿದ್ದಾರೆ.
- ಆಗ ಐಫೋನ್ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ. ನಂತರ ಎಚ್ಚೆತ್ತುಕೊಂಡು ಹೊಗೆ ಮತ್ತು ಬೆಂಕಿ ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಫೋನ್ ಸಂಪೂರ್ಣವಾಗಿ ಸುಟ್ಟುಹೋಗಿತ್ತು.
- ಈ ಘಟನೆಯ ನಂತರ ಸಾಕಷ್ಟು ಹಾನಿಯಾಗಿದೆ. ಅಪಾರ್ಟ್‌ಮೆಂಟ್‌ನ ಗೋಡೆಗಳು ಹೊಗೆಯಿಂದ ಸಂಪೂರ್ಣ ಕಪ್ಪಾಗಿದ್ದು, ಹಾಸಿಗೆ ಕೂಡ ಸುಟ್ಟು ಕರಕಲಾಗಿದೆ.
- ಈ iPhone 14 Pro Max ಅನ್ನು 2022ರಲ್ಲಿ ಖರೀದಿಸಲಾಗಿದೆ ಮತ್ತು ಅದರ ವಾರಂಟಿ ಅವಧಿ ಮುಗಿದಿದೆ.
- ಪ್ರಾಥಮಿಕ ವರದಿಗಳ ಪ್ರಕಾರ, ಬ್ಯಾಟರಿಯಲ್ಲಿನ ದೋಷದಿಂದ ಇಂತಹ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
- ಮಹಿಳೆ ವಾಸಿಸುತ್ತಿದ್ದ ಬಾಡಿಗೆ ಮನೆಗೆ ಹಾನಿಯಾದ ಕಾರಣ ಮಾಲೀಕರು ಅದರ ಹಾನಿಯನ್ನು ನೀಡುವಂತೆ ಕೇಳಿದ್ದಾರೆ.
ಆ್ಯಪಲ್ ಕಂಪನಿ ಹೇಳಿದೇನು?: ಘಟನೆಯ ಬಗ್ಗೆ ತಿಳಿದ ನಂತರ ಆ್ಯಪಲ್ ಕಸ್ಟಮರ್ ಕೇರ್ ಕಳವಳ ವ್ಯಕ್ತಪಡಿಸಿದೆ. ಮೊಬೈಲ್ನಲ್ಲಿರುವ ಬ್ಯಾಟರಿ ಒರಿಜಿನಲ್ ಆಗಿದೆಯೇ ಅಥವಾ ರಿಪೇರಿ ಮಾಡುವಾಗ ಬದಲಾಯಿಸಲಾಗಿದೆಯೇ ಎಂಬುದು ತಿಳಿದಿಲ್ಲ. ಕಂಪನಿ ತನ್ನ ಉತ್ಪನ್ನಗಳಿಗೆ ಸಂಬಂಧಿಸಿದ ಯಾವುದೇ ಸಂಭಾವ್ಯ ಭದ್ರತಾ ಸಮಸ್ಯೆಗಳನ್ನು ತನಿಖೆಗೊಳಪಡಿಸಲು ತನ್ನ ಬದ್ಧತೆಯನ್ನು ಒತ್ತಿಹೇಳಿದೆ.
iPhone 14 Pro Max apparently exploded while charging,
— choqao (@choqao) November 4, 2024
causing severe burns!#Apple pic.twitter.com/lQ8EG0vP2B
ಹೆಚ್ಚು ಹೊತ್ತು ಚಾರ್ಜ್ ಮಾಡಬೇಡಿ: ಘಟನೆಗೆ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ಆದರೆ ಎಲೆಕ್ಟ್ರಾನಿಕ್ಸ್, ವಿಶೇಷವಾಗಿ ಸ್ಮಾರ್ಟ್‌ಫೋನ್‌ಗಳನ್ನು ದೀರ್ಘಕಾಲದವರೆಗೆ ಚಾರ್ಜ್‌ನಲ್ಲಿ ಇಡದಂತೆ ಸೂಚಿಸಲಾಗಿದೆ. ಚಾರ್ಜ್ ಮಾಡುವಾಗ ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳುವುದು ಇದೇ ಮೊದಲಲ್ಲ ಮತ್ತು ಇದು ಕೊನೆಯೂ ಅಲ್ಲ. ಆದರೆ ನಾವು ಕಂಪನಿ ಒದಗಿಸಿದ ಅಧಿಕೃತ ಚಾರ್ಜರ್ ಮತ್ತು ಬ್ಯಾಟರಿ ಘಟಕವನ್ನು ಮಾತ್ರ ಬಳಸಬೇಕು. ಏಕೆಂದರೆ ಭವಿಷ್ಯದಲ್ಲಿ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಬಹುದಾಗಿದೆ.
ಇದನ್ನೂ ಓದಿ: ನಥಿಂಗ್‌ನಿಂದ ಹೊಸ ಆಪರೇಟಿಂಗ್ ಸಿಸ್ಟಮ್ ಅಭಿವೃದ್ಧಿ