ಕರ್ನಾಟಕ

karnataka

ETV Bharat / videos

ಭರಚುಕ್ಕಿಯಲ್ಲಿ ಫೋಟೋಗಾಗಿ ಯುವಕರ ಹುಚ್ಚಾಟ: ಬಸ್ಕಿ ಹೊಡೆಸಿ ಪೊಲೀಸರಿಂದ ಶಿಸ್ತಿನ ಪಾಠ - Bharachukki Waterfalls - BHARACHUKKI WATERFALLS

By ETV Bharat Karnataka Team

Published : Jul 29, 2024, 11:21 AM IST

ಚಾಮರಾಜನಗರ: ಕಾವೇರಿ ನದಿ ಹೊರ ಹರಿವು ಹೆಚ್ಚಾಗಿದ್ದು, ಕೊಳ್ಳೇಗಾಲದ ಭರಚುಕ್ಕಿ ಜಲಪಾತ ಮೈದುಂಬಿ ಮನಮೋಹಕ ಜಲಸಿರಿ ಸೃಷ್ಟಿಯಾಗಿದೆ. ಈ ಜಲ ವೈಯ್ಯಾರ ಕಾಣಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಕೇವಲ ಕಣ್ಣಿನಲ್ಲೇ ಪ್ರಕೃತಿ ಸೌಂದರ್ಯ ಸವಿಯದೇ ಫೋಟೋ, ರೀಲ್ಸ್​ಗಾಗಿ ಹಲವರು ಪ್ರಾಣಕ್ಕೆ ಕಂಟಕ ತಂದುಕೊಳ್ಳುತ್ತಿದ್ದಾರೆ. ಇದೇ ರೀತಿ ಭರಚುಕ್ಕಿ ಜಲಪಾತದ ತುದಿಗೆ ತೆರಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿದ್ದವರಿಗೆ ಪೊಲೀಸರು ಬಸ್ಕಿ ಹೊಡೆಸಿ ಪಾಠ ಕಲಿಸಿದರು.

ಭರಚುಕ್ಕಿ ಜಲಪಾತದ ನೀರು ಧುಮ್ಮಿಕ್ಕುವ ಹಿಂಭಾಗಕ್ಕೆ ಬಂದು ಫೋಟೋ ಕ್ರೇಜ್​ಗಾಗಿ ಅಪಾಯಕಾರಿ ಸ್ಥಳದಲ್ಲಿ ಕೆಳಗಿಳಿಯುತ್ತಿದ್ದ ಮಾಹಿತಿ ಅರಿತ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಯುವಕರನ್ನು ಹಿಂದಕ್ಕೆ ಕರೆಸಿ ಸರಿಯಾಗಿ ಬಸ್ಕಿ ಹೊಡೆಸಿದರು. ಫೋಟೋಗಾಗಿ ಪ್ರಾಣಕ್ಕೆ ಅಪಾಯ ತಂದುಕೊಳ್ಳಬೇಡಿ ಎಂದು 15ಕ್ಕೂ ಹೆಚ್ಚು ಯುವಕರಿಗೆ ಬುದ್ದಿವಾದ ಹೇಳಿ, ಬಸ್ಕಿ ಹೊಡೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಇದನ್ನೂ ಓದಿ: ಗಂಗಾವಳಿಯಲ್ಲಿ ಶೋಧಕ್ಕಿಳಿದವರಿಗೆ ಪತ್ತೆಯಾಗಿದ್ದು ಕಲ್ಲು, ಮಣ್ಣು ; ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತಕ್ಕೆ ಜಿಲ್ಲಾಡಳಿತ ನಿರ್ಧಾರ? - Shirur Hill Collapse Operation stop

ABOUT THE AUTHOR

...view details