ಕರ್ನಾಟಕ

karnataka

ETV Bharat / videos

ಬಳ್ಳಾರಿ: ಬೆಂಕಿ ಹೊತ್ತಿ ಉರಿದ ವಿಂಡ್ ಫ್ಯಾನ್, ದಟ್ಟ ಹೊಗೆ ಕಂಡು ಜನರಿಗೆ ಆತಂಕ - WIND FAN CATCHES FIRE

By ETV Bharat Karnataka Team

Published : Feb 22, 2025, 5:39 PM IST

ಬಳ್ಳಾರಿ: ರೈತರ ಜಮೀನಿನಲ್ಲಿ ಅಳವಡಿಸಲಾಗಿದ್ದ ಖಾಸಗಿ ಕಂಪನಿಯ ವಿಂಡ್ ಫ್ಯಾನ್​ಗೆ ಬೆಂಕಿ ಹೊತ್ತಿ ಉರಿದ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹಿರಾಳ್ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ ರೈತರಾದ ವೀರೇಶ್, ಕುಮಾರಸ್ವಾಮಿ ಹಾಗೂ ರಾಮಾಂಜನೇಯ ಎಂಬವರ ಜಮೀನಿನಲ್ಲಿ ಖಾಸಗಿ ಕಂಪನಿಯು ವಿಂಡ್ ಫ್ಯಾನ್‍ ಅಳವಡಿಸಿತ್ತು. ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ವಿಂಡ್ ಫ್ಯಾನ್ ಹೊತ್ತಿ ಉರಿದ ಹಿನ್ನೆಲೆಯಲ್ಲಿ ಬೆಂಕಿಯಿಂದ ಜಮೀನಿನಲ್ಲಿ ದಟ್ಟ ಹೊಗೆ ಆವರಿಸಿತ್ತು. ಹೊಗೆ ಕಂಡು ಗ್ರಾಮದ ಜನರು ಕೆಲಕಾಲ ಆತಂಕಗೊಂಡಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ 3 ಅಗ್ನಿಶಾಮಕ ವಾಹನಗಳ ಸಿಬ್ಬಂದಿ ನಿರಂತರವಾಗಿ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದ್ದಾರೆ.

ಘಟನಾ ಸ್ಥಳಕ್ಕೆ ಚೋರನೂರು ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚೋರನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇದನ್ನೂ ಓದಿ: ಮೈಸೂರು ಚಾಮುಂಡಿಬೆಟ್ಟದಲ್ಲಿ ಭಾರೀ ಬೆಂಕಿ: ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ

ಇದನ್ನೂ ಓದಿ: ಉಡುಪಿ: ಬೆಂಕಿ ತಗುಲಿ ಮೀನುಗಾರಿಕಾ ಬೋಟ್​ ಸುಟ್ಟು ಕರಕಲು, ಅಪಾರ ನಷ್ಟ

ಇದನ್ನೂ ಓದಿ: 15 ವರ್ಷ ಮೇಲ್ಪಟ್ಟ 463 ಹಳೆಯ ಅಗ್ನಿಶಾಮಕ ವಾಹನಗಳು ಗುಜರಿಗೆ: 6 ತಿಂಗಳಲ್ಲಿ ರಸ್ತೆಗಿಳಿಯಲಿವೆ 184 ಹೊಸ ವಾಹನಗಳು

ABOUT THE AUTHOR

...view details