VIDEO: ಜಿಂಕೆ ಹಿಂಡನ್ನು ಅಟ್ಟಾಡಿಸಿದ ಚಿರತೆಗೆ ನಿರಾಸೆ; ಪ್ರವಾಸಿಗರಿಗೆ ರಗಡ್ ಲುಕ್ ನೀಡಿದ ಹುಲಿರಾಯ - LEOPARD ATTEMPTS TO HUNT DEER
Published : Jan 2, 2025, 5:08 PM IST
ಚಾಮರಾಜನಗರ: ಬಂಡೀಪುರ ಸಫಾರಿಗೆ ತೆರಳಿದ್ದವರಿಗೆ ಚಿರತೆಯ ಭರ್ಜರಿ ಬೇಟೆ ಹಾಗೂ ಹೆಬ್ಬುಲಿಯ ದರ್ಶನವಾಗಿದ್ದು, ಪ್ರವಾಸಿಗರು ಸಖತ್ ಥ್ರಿಲ್ ಆಗಿದ್ದಾರೆ. ಜಿಂಕೆ ಹಿಂಡಿನ ಮೇಲೆ ಕಣ್ಣಿಟ್ಟ ಚಿರತೆಯೊಂದು ಮೊದಲು ಜಿಂಕೆ ಮರಿಯನ್ನು ಅಟ್ಟಾಡಿಸಿದೆ, ಆದರೆ ಅದು ಮಿಂಚಿನಂತೆ ಓಟ ಕಿತ್ತಿದೆ. ಬಳಿಕ ಗುಂಪಿನಲ್ಲಿದ್ದ ಮತ್ತೊಂದು ಜಿಂಕೆಯನ್ನೂ ಚಿರತೆ ಅಟ್ಟಾಡಿಸಿದ್ದು, ಅದೂ ಕೂಡ ಚಿರತೆಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದೆ. ಚಿರತೆಯ ಶರವೇಗದ ಓಟವನ್ನೂ ಮೀರಿಸಿ ಜಿಂಕೆ ಪರಾರಿಯಾಗಿದ್ದು, ಪ್ರವಾಸಿಗರನ್ನು ರೋಮಾಂಚನಗೊಳಿಸಿದೆ. ಇನ್ನೊಂದೆಡೆ, ಸಫಾರಿಗರಿಗೆ ಹೆಬ್ಬುಲಿಯ ದರ್ಶನವೂ ಸಿಕ್ಕಿದೆ. ರಗಡ್ ಲುಕ್ನಲ್ಲಿ ಹೆಜ್ಜೆ ಹಾಕಿದ ಹುಲಿ ಕಂಡ ಸಫಾರಿಗರು ಫಿದಾ ಆಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಂಡೀಪುರವು ದೇಶದ ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾಗಿದ್ದು, ಸಫಾರಿಗರು ವರ್ಷಾಂತ್ಯದ ದಿನ 4 ಮರಿಗಳ ಜೊತೆ ತಾಯಿ ಹುಲಿಯನ್ನು ಕಂಡಿದ್ದರು.
ಇದನ್ನೂ ಓದಿ: Watch in video: ಕೆರೆ ಹಾವು ನುಂಗಿ ನರಳಾಡುತ್ತಿದ್ದ 14 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
ಇದನ್ನೂ ಓದಿ: ಬಂಡೀಪುರ: ನಾಲ್ಕು ಮರಿಗಳೊಂದಿಗೆ ತಾಯಿ ಹುಲಿ! ದೃಶ್ಯ ನೋಡಿ ಪ್ರವಾಸಿಗರು ಪುಳಕ- ನೋಡಿ