ಕರ್ನಾಟಕ

karnataka

ETV Bharat / videos

ಅಮೆರಿಕದ ಶಿಕ್ಷಕಿಯ ವರಿಸಿದ ಆಂಧ್ರದ ವೈದ್ಯ: ಕ್ರಿಶ್ಚಿಯನ್​ ಸಂಪ್ರದಾಯದಂತೆ ಮದುವೆ- ವಿಡಿಯೋ - AP MAN MARRIED AMERICAN GIRL

By ETV Bharat Karnataka Team

Published : Feb 12, 2025, 7:05 PM IST

ಮುನಗಚರ್ಲ(ಆಂಧ್ರ ಪ್ರದೇಶ): ಪ್ರೀತಿಗೆ ಯಾವುದೇ ದೇಶ, ಭಾಷೆ, ಜಾತಿ, ಧರ್ಮಗಳ ಗಡಿಯಿಲ್ಲ ಅಂತಾರೆ. ಅದರಂತೆ ಆಂಧ್ರ ಪ್ರದೇಶದ ಯುವಕನೋರ್ವ ಅಮೆರಿಕದ ಯುವತಿಯನ್ನು ಮದುವೆಯಾಗಿ ಪ್ರೀತಿಗೆ ದೇಶ, ಭಾಷೆಯ ಗಡಿಯಿಲ್ಲ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದ್ದಾರೆ.

ಎನ್​ಟಿಆರ್​ ಜಿಲ್ಲೆಯ ನಂದಿಗಮದ ಪಗಿಡಪಲ್ಲಿಯ ಆನಂದ್​ ಅವರು ಸೋಮವಾರ ರಾತ್ರಿ ಅಮೆರಿಕದ ಯಂಬರ್​ ಅವರನ್ನು ವಿವಾಹವಾದರು. ಅದ್ಧೂರಿಯಾಗಿ ನಡೆದ ಈ ಸಮಾರಂಭದಲ್ಲಿ ಸಂಬಂಧಿಕರು, ಸ್ನೇಹಿತರು ಹಾಗೂ ಹಿತೈಷಿಗಳು ಪಾಲ್ಗೊಂಡಿದ್ದರು.  

ಎಂಬಿಬಿಎಸ್​ ಹಾಗೂ ಎಂಡಿ ಶಿಕ್ಷಣ ಮುಗಿಸಿರುವ ಆನಂದ್​ ಕಳೆದ 15 ವರ್ಷಗಳಿಂದ ಅಮೆರಿಕದಲ್ಲಿ ವೈದ್ಯ ವೃತ್ತಿಯ ಜೊತೆಗೆ ಉದ್ಯಮಿಯಾಗಿದ್ದು, ನ್ಯಾಶ್​ವಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಯಂಬರ್​ ಅವರನ್ನು ಭೇಟಿಯಾಗಿದ್ದಾರೆ. ಪರಿಚಯ ಕ್ರಮೇಣ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಮದುವೆಗೆ ಎರಡೂ ಕುಟುಂಬಗಳು ಒಪ್ಪಿದ್ದಾರೆ. ವರನ ತಂದೆ ದೇವಸಹಾಯಂ ಹಾಗೂ ವಧುವಿನ ಪೋಷಕರಾದ ಡೇವಿಡ್ ಹಾಗೂ ಬೆತ್​ ಅವರ ಸಮ್ಮುಖದಲ್ಲಿ ಕ್ರಿಶ್ಚಿಯನ್​ ಸಂಪ್ರದಾಯದಂತೆ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟರು.

ನಂದಿಗಮದ ಹೊರವಲಯದಲ್ಲಿರುವ ಕಾಲೇಜು ಆವರಣದಲ್ಲಿ ವಿವಾಹೋತ್ಸವ ನಡೆಯಿತು. ಅಮೆರಿಕನ್​ ಹುಡುಗಿ ಹಾಗೂ ಆಂಧ್ರದ ಹುಡುಗನ ವಿವಾಹ ಸಮಾರಂಭವನ್ನು ನೋಡಲು ಜನಸಮೂಹವೇ ಸೇರಿತ್ತು. ಅಮೆರಿಕದಿಂದ ಬಂದ ವಧುವಿನ ಪೋಷಕರು ಹಾಗೂ ಸಂಬಂಧಿಕರು ಸಮಾರಂಭದಲ್ಲಿ ಭಾಗವಹಿಸಿದ್ದರು. ಹಲವು ಗಣ್ಯರೂ ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವಜೋಡಿಯನ್ನು ಹರಸಿದರು.​

ಇದನ್ನೂ ನೋಡಿ: ಅಮೆರಿಕದ ಕೆಲ್ಲಿ ಲವ್ಸ್‌ ಚಿತ್ರದುರ್ಗದ ಅಭಿಲಾಷ್: ಭಾರತೀಯ ಸಂಪ್ರದಾಯದಂತೆ ಅದ್ಧೂರಿ ವಿವಾಹ

ABOUT THE AUTHOR

...view details