ಕರ್ನಾಟಕ

karnataka

ETV Bharat / videos

ಗೂಳಪ್ಪಮುತ್ಯಾ ಜಾತ್ರೆಯಲ್ಲಿ ಟ್ರ್ಯಾಕ್ಟರ್ ಜಗ್ಗಾಟದ ಸ್ಪರ್ಧೆ: ವಿಡಿಯೋ - Tractor Competition - TRACTOR COMPETITION

By ETV Bharat Karnataka Team

Published : Aug 6, 2024, 9:25 PM IST

ವಿಜಯಪುರ: ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಇಂದು ಗೂಳಪ್ಪಮುತ್ಯಾ ಜಾತ್ರೆಯ ಪ್ರಯುಕ್ತ ಟ್ರ್ಯಾಕ್ಟರ್ ಜಗ್ಗಾಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 4.5 ಟನ್ ತೂಕದ ಟ್ರ್ಯಾಕ್ಟರ್​ಗಳು ಭಾಗಿಯಾಗಿದ್ದವು. ಸ್ಪರ್ಧೆಯನ್ನು ವೀಕ್ಷಿಸಲು ನಾಗಠಾಣ ಗ್ರಾಮಸ್ಥರು ಮಾತ್ರವಲ್ಲದೇ ಸುತ್ತಮುತ್ತಲಿನ ಸಾವಿರಾರು ಜನ ನೆರೆದಿದ್ದರು. ನಾಗಠಾಣ ಗ್ರಾಮದ ಜಂಬಗಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಎಳೆಯುವ ಸ್ಪರ್ಧೆ ನಡೆಯಿತು. 

ಸುಮಾರು 50ಕ್ಕೂ ಅಧಿಕ ಟ್ರ್ಯಾಕ್ಟರ್​ಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು ಎಂದು ಆಯೋಜಕರು ತಿಳಿಸಿದ್ದಾರೆ. ಆಯ ತಪ್ಪಿದರೆ ಸಾಕು ನೆರೆದವರ ಮೇಲೆಯೇ ಟ್ರ್ಯಾಕ್ಟರ್ ಬೀಳುವ ಸಂಭವ ಹೆಚ್ಚಿತ್ತು. ಆದರೆ ಸ್ಪರ್ಧೆಯಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಊರಿನ ಹಿರಿಯರು ಮತ್ತು ಜಾತ್ರಾ ಕಮಿಟಿ ಸ್ಪರ್ಧಾ ಆಯೋಜಕರು ಸ್ವಯಂಸೇವಕರನ್ನು ನಿಯೋಜಿಸಿದ್ದರು. 

ಸ್ಪರ್ಧೆಯ ವೇಳೆ ಜನರನ್ನು ನಿಯಂತ್ರಿಸಲು ಹರಸಾಹಸ ನಡೆಯಿತು. ಟ್ರ್ಯಾಕ್ಟರ್‌​ಗಳ ಜಗ್ಗಾಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ‌ ನೀಡಿ ಸಂಘಟಕರು ಸನ್ಮಾನಿಸಿ ಗೌರವಿಸಿದರು.

ಇದನ್ನೂ ಓದಿ : ಹಾಲು ಕರೆಯುವ ಸ್ಪರ್ಧೆ: 49.7 ಲೀಟರ್​ ಹಾಲು ಕರೆದ ರೈತನಿಗೆ 1 ಲಕ್ಷ ರೂ ಬಹುಮಾನ

ABOUT THE AUTHOR

...view details