ನೀರಿನ ಕಟ್ಟೆಯಲ್ಲಿ ಬಾಯಾರಿಕೆ ತಣಿಸಿಕೊಂಡ ಹುಲಿ: ವಿಡಿಯೋ
Published : Feb 5, 2024, 7:08 PM IST
ಮೈಸೂರು: ಬೇಸಿಗೆ ಹತ್ತಿರವಾಗುತ್ತಿದ್ದಂತೆ ಬಿಸಿಲ ಬೇಗೆ ಹೆಚ್ಚುತ್ತಿದೆ. ಕಾಡಿನಲ್ಲಿ ಪ್ರಾಣಿಗಳು ಬಾಯಾರಿಕೆ ತಣಿಸಿಕೊಳ್ಳಲು ಹಪಹಪಿಸುತ್ತಿವೆ. ಅವುಗಳು ನೀರಿನ ಮೂಲಗಳನ್ನು ಹುಡುಕಿಕೊಂಡು ತಿರುಗಾಡುತ್ತಿವೆ. ಇದೇ ರೀತಿ ಹುಲಿಯೊಂದು ಬಾಯಾರಿಕೆ ತಣಿಸಿಕೊಳ್ಳಲು ಕಟ್ಟೆಯಲ್ಲಿ ನೀರು ಕುಡಿಯುತ್ತಿರುವ ದೃಶ್ಯ ಹೆಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ಸಫಾರಿ ಕೇಂದ್ರದ ಅರಣ್ಯ ವಲಯದಲ್ಲಿ ಸೆರೆಯಾಗಿದೆ.
ಸಫಾರಿ ವಾಹನದಲ್ಲಿ ಹೊರಟ ಪ್ರವಾಸಿಗರಿಗೆ ಎರಡು ಹುಲಿಗಳು ನೀರು ಕುಡಿಯುತ್ತಿರುವ ದೃಶ್ಯ ಕಂಡುಬಂದಿದೆ. ಹುಲಿಗಳು ನೀರಿನಲ್ಲೇ ಸ್ವಲ್ಪ ಹೊತ್ತು ನಿಂತು ದೇಹವನ್ನು ತಣ್ಣಗೆ ಮಾಡಿಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು.
ಕಾಡ್ಗಿಚ್ಚು ಆತಂಕ: ಒಂದೆಡೆ ಕುಡಿಯಲು ನೀರು, ಇನ್ನೊಂದೆಡೆ ಕಾಡು ಪ್ರಾಣಿಗಳಿಗೆ ಕಾಡ್ಗಿಚ್ಚಿನ ಭಯವೂ ಎದುರಾಗಿದೆ. ಈ ನಿಟ್ಟಿನಲ್ಲಿ ಕಾಡಿನ ಮಧ್ಯೆ ಇರುವ ಸಣ್ಣಪುಟ್ಟ ಕೆರೆಗಳಿಗೆ ನೀರು ತುಂಬಿಸಲು ಅರಣ್ಯ ಇಲಾಖೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಕಾಡ್ಗಿಚ್ಚು ತಪ್ಪಿಸಲು ಹಲವು ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಕೈಗೊಳ್ಳಲು ಇಲಾಖೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ.
ಇದನ್ನೂ ಓದಿ: ನಾಗರಹೊಳೆಯಲ್ಲಿ ಮರವೇರಿ ಕುಳಿತ ಹುಲಿಯ ದೃಶ್ಯ ಸೆರೆ- ನೋಡಿ