ವಿಡಿಯೋ: ಆನೆ ಆರ್ಭಟಕ್ಕೆ ಹೆದರಿ ಕೆರೆಯಿಂದ ಪೇರಿ ಕಿತ್ತ ಹುಲಿರಾಯ! - Tiger Escapes - TIGER ESCAPES
Published : May 2, 2024, 7:36 PM IST
ಚಾಮರಾಜನಗರ: ಏನ್ ಸೆಕೆನಪ್ಪಾ ಅಂಥಾ ಕೆರೆಯಲ್ಲಿ ಮಲಗಿ ಕೂಲ್ ಕೂಲ್ ಆಗುತ್ತಿದ್ದ ಹುಲಿಯು ಆನೆಯನ್ನು ಕಂಡು ಕಂಗೆಟ್ಟು ಓಡಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಫಾರಿಯಲ್ಲಿ ಗುರುವಾರ ನಡೆದಿದೆ.
ಆನೆ ಸಮೀಪ ಬಂದ ತಕ್ಷಣ ಹುಲಿರಾಯ ಪೇರಿ ಕಿತ್ತಿದ್ದನ್ನು ಕಂಡ ಸಫಾರಿಗರು ರೋಮಾಂಚಿತರಾಗಿದ್ದಾರೆ. ಬಂಡೀಪುರದ ಕೆರೆಯಲ್ಲಿ ಬಿಸಿಲಿನ ತಾಪಕ್ಕೆ ಹುಲಿಯೊಂದು ಇಳಿದು ರಿಲ್ಯಾಕ್ಸ್ ಮೂಡಿಗೆ ಜಾರಿತ್ತು. ಇದೇ ವೇಳೆ ದಾಹ ತಣಿಸಿಕೊಳ್ಳಲು ಬಂದ ಆನೆ ನೀರು ಕುಡಿದ ನಂತರ ಹುಲಿಯನ್ನು ಕಂಡಿದೆ. ಕೂಡಲೇ ದಾಳಿ ಮಾಡುವಂತೆ ಆನೆಯು ಮುನ್ನುಗ್ಗಿದ್ದು, ಇದನ್ನು ಗಮನಿಸಿದ ಹುಲಿ ಕೆರೆಯಿಂದ ಎದ್ದು ಓಡಿದೆ. ಸದ್ಯ, ಸಫಾರಿಗರು ಸೆರೆ ಹಿಡಿದಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಇದನ್ನೂ ಓದಿ: ಆನೆ ದಾಳಿಯಿಂದ ಕೂದಲೆಳೆಯಲ್ಲಿ ಪಾರಾದ ಕೂಲಿ ಕಾರ್ಮಿಕ: ವಿಡಿಯೋ ವೈರಲ್
ಮರಿಗೆ ಹೊಂಚು ಹಾಕಿದ್ದ ವ್ಯಾಘ್ರನನ್ನು ಆನೆಯೊಂದು ಅಟ್ಟಾಡಿಸಿದ ಘಟನೆ ಬಂಡೀಪುರ ಅರಣ್ಯದಲ್ಲಿ ಇತ್ತೀಚೆಗೆ ನಡೆದಿತ್ತು. ಆನೆಯೊಂದು ತನ್ನ ಮರಿ ಜೊತೆ ತೆರಳುತ್ತಿದ್ದಾಗ ಹುಲಿರಾಯ ಹೊಂಚು ಹಾಕಿತ್ತು. ಕೂಡಲೇ ಎಚ್ಚೆತ್ತ ಆನೆ, ಹುಲಿಯನ್ನು ಅಟ್ಟಾಡಿಸಿ ಓಡಿಸಿತ್ತು. ಇದರ ವಿಡಿಯೋವನ್ನು ಸಫಾರಿಗರು ಸೆರೆಹಿಡಿದಿದ್ದರು.
ಇದನ್ನೂ ಓದಿ: ಕಾಡಾನೆಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರ : ವಿಡಿಯೋ