ಮಣ್ಣಿನಲ್ಲಿ ಗಣಪತಿ ಮಾಡುವ ಕಾರ್ಯಾಗಾರದಲ್ಲಿ ಶಾಲಾ ಮಕ್ಕಳು ಭಾಗಿ - clay Ganesha idol - CLAY GANESHA IDOL
Published : Sep 6, 2024, 7:32 PM IST
ಮೈಸೂರು : ಗೌರಿ ಗಣೇಶ ಹಬ್ಬದ ಹಿನ್ನೆಲೆ ಪರಿಸರ ಬಳಗದ ವತಿಯಿಂದ ಮಕ್ಕಳಿಗಾಗಿ ಜೇಡಿಮಣ್ಣಿನಲ್ಲಿ ಗಣೇಶ ಮೂರ್ತಿಯನ್ನ ಮಾಡುವ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಮಕ್ಕಳು ತಾವು ಮಾಡಿದ ಮಣ್ಣಿನ ಗಣಪನನ್ನ ತಾವೇ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿ, ನೀರಿಗೆ ಬಿಡುವ ಕಾರ್ಯಾಗಾರವನ್ನು ಏರ್ಪಡಿಸಿದೆ. ಇಲ್ಲಿ ವಿಭಿನ್ನ ಗಣೇಶ ಮೂರ್ತಿಗಳನ್ನ ಮಕ್ಕಳು ತಯಾರಿಸಿದ್ದಾರೆ.
ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಪಿಒಪಿ ಗಣೇಶ ಮೂರ್ತಿಗಳು ಬಂದಿವೆ. ಇವುಗಳಿಂದ ಪರಿಸರಕ್ಕೆ ಭಾರಿ ಹಾನಿಯಾಗಲಿದೆ. ಈ ಹಿನ್ನೆಲೆ ಮೈಸೂರು ಪರಿಸರ ಬಳಗವು ವಿವಿಧ ಶಾಲೆಯ ಮಕ್ಕಳಿಗೆ ಮಣ್ಣಿನಿಂದ ಗಣಪನನ್ನ ಮಾಡುವ ಕಾರ್ಯಾಗಾರವನ್ನು ಏರ್ಪಡಿಸಿದೆ. ಮಕ್ಕಳು ಜೇಡಿಮಣ್ಣಿನಿಂದ ಗಣಪತಿ ನಿರ್ಮಿಸಿದ್ದಾರೆ.
ಈ ಕುರಿತು ವಿದ್ಯಾರ್ಥಿನಿ ರಾಸ್ವಿ ಮಾತನಾಡಿ, 'ಪಿಒಪಿ ಗಣಪತಿ ನೀರಿನಲ್ಲಿ ಕರಗುವುದಿಲ್ಲ, ಅವುಗಳನ್ನ ನೀರಿಗೆ ಹಾಕಿದರೆ ಮಾಲಿನ್ಯ ಉಂಟಾಗುತ್ತದೆ. ಇದರಿಂದ ಪ್ರಾಣಿ - ಪಕ್ಷಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಪಿಒಪಿ ಗಣಪತಿ ಕೂರಿಸಬಾರದು. ನೈಸರ್ಗಿಕವಾಗಿ ಇರುವ ಪರಿಸರ ಸ್ನೇಹಿ ಗಣಪತಿಯನ್ನ ಕೂರಿಸುವುದರಿಂದ ಪರಿಸರ ಸಂರಕ್ಷಣೆಯಾಗುತ್ತದೆ' ಎಂದಿದ್ದಾರೆ.
ಇದನ್ನೂ ಓದಿ : ಕಡಲ ನಗರಿಯಲ್ಲಿ ಕಳೆಗಟ್ಟಿದ ಗಣೇಶೋತ್ಸವ; ಅದ್ದೂರಿ ಆಚರಣೆಗೆ ಭರದ ಸಿದ್ಧತೆ - Ganesha festival