ಕರ್ನಾಟಕ

karnataka

ETV Bharat / videos

ಮಲೆಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ರಥೋತ್ಸವ: ವೈಭವ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

By ETV Bharat Karnataka Team

Published : Mar 11, 2024, 1:20 PM IST

Updated : Mar 11, 2024, 1:29 PM IST

ಚಾಮರಾಜನಗರ: ಪ್ರಸಿದ್ಧ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಇಂದು ವೈಭವದಿಂದ ಮಲೆಮಹದೇಶ್ವರ ರಥೋತ್ಸವ ನಡೆಯಿತು. ಸೋಮವಾರ ಬೆಳಗ್ಗೆ 9.40 ರಿಂದ 10.10ರವರೆಗೆ ಸಲ್ಲುವ ಶುಭಲಗ್ನದಲ್ಲಿ ನಡೆದ ಮಹದೇಶ್ವರ ಸ್ವಾಮಿಯ ಮಹಾರಥೋತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತರು ಸಾಕ್ಷಿಯಾದರು. 

ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರ ನೇತೃತ್ವದಲ್ಲಿ ಬೇಡಗಂಪಣ ಸಮುದಾಯದ ಪುಟ್ಟ ಬಾಲೆಯರ ಬೆಲ್ಲದ ಆರತಿಯೊಂದಿಗೆ, ಮಂಗಳವಾದ್ಯಗಳ, ತಾಳ ಮೇಳಗಳು ಹಾಗೂ ಭಕ್ತಗಣದ ಜೊತೆಗೆ ದೇವಾಲಯದ ಹೊರ ಆವರಣದಲ್ಲಿ ಜಯಘೋಷಗಳ ಜೊತೆ ತೇರು ಸಾಗಿತು.

ಕಳೆದ 5 ದಿನಗಳಿಂದ ಪಾದಯಾತ್ರೆ, ಬಸ್​ಗಳ‌ ಮೂಲಕ ಕ್ಷೇತ್ರಕ್ಕೆ ಲಕ್ಷಾಂತರ ಮಂದಿ ಭಕ್ತರು ಆಗಮಿಸಿದ್ದು, ದೇವರ ದರ್ಶನ ಪಡೆದು ಹರಕೆ ತೀರಿಸಿದ್ದಾರೆ. ಪ್ರಾಧಿಕಾರವೂ ಕೂಡ 5 ಲಕ್ಷ ಲಾಡು ಪ್ರಸಾದ ತಯಾರಿಸಿ, ಕುಡಿಯುವ ನೀರು, ನಿರಂತರ ದಾಸೋಹ, ಶೌಚಾಲಯದ ವ್ಯವಸ್ಥೆ ಸೇರಿ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಿತ್ತು.

ಇದನ್ನೂ ನೋಡಿ: ಸಾಂಸ್ಕೃತಿಕ ನಗರಿಯಲ್ಲಿ ಶಿವರಾತ್ರಿ ಸಂಭ್ರಮ: ಕುಟುಂಬ ಸಮೇತ ತ್ರಿನೇಶ್ವರನ ದರ್ಶನ ಪಡೆದ ಯದುವೀರ್

Last Updated : Mar 11, 2024, 1:29 PM IST

ABOUT THE AUTHOR

...view details