ಮೈಸೂರು: ಹುಣಸೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ - Serial accident
Published : Jun 23, 2024, 10:49 PM IST
ಮೈಸೂರು : ಹುಣಸೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತವಾಗಿ ಆರು ಕಾರುಗಳು ಜಖಂ ಆಗಿ, ಎಲ್ಲರೂ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಹುಣಸೂರು ತಾಲೂಕಿನ ಕೊಳಘಟ್ಟ ಗ್ರಾಮದಲ್ಲಿ ನಡೆದಿದೆ.
ಕಾರುಗಳ ಮೂಲಕ ಮೈಸೂರಿಗೆ ಬರುತ್ತಿದ್ದಾಗ ಕೊಳಘಟ್ಟ ಗ್ರಾಮದ ಬಳಿ ಹಂಪ್ಸ್ ಬಳಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಈತನ ಎಡವಟ್ಟಿನಿಂದಾಗಿ ಹಿಂದೆ ಬರುತ್ತಿದ್ದ ಕಾರುಗಳು ಒಂದಕ್ಕೆ ಒಂದು ಡಿಕ್ಕಿ ಹೊಡೆದು ಜಖಂಗೊಂಡಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಘಟನೆಯಿಂದ ಕೆಲಹೊತ್ತು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಫುಟ್ಪಾತ್ಗೆ ನುಗ್ಗಿದ ಗೂಡ್ಸ್ ವಾಹನ : ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಫುಟ್ಪಾತ್ ಮೇಲೆ ನುಗ್ಗಿದ ಘಟನೆ ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ರಮಣ್ಯನಗರದಲ್ಲಿ ಗುರುವಾರ ಮಧ್ಯಾಹ್ನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು.
ಗೂಡ್ಸ್ ವಾಹನ ಏಕಾಏಕಿ ರಸ್ತೆಯ ಬಲಭಾಗದ ಪಾದಚಾರಿ ರಸ್ತೆ ಮೇಲೆ ಹರಿದಿದ್ದು, ಬಳಿಕ ಅಂಗಡಿಗೆ ನುಗ್ಗಿತ್ತು. ಇದಕ್ಕೂ ಮುನ್ನ ಬೈಕ್ಗೆ ಡಿಕ್ಕಿ ಹೊಡೆದಿತ್ತು. ಬೈಕ್ ಸವಾರನಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಇದನ್ನೂ ಓದಿ : ಚಾಲಕನ ನಿಯಂತ್ರಣ ಕಳೆದುಕೊಂಡು ಫುಟ್ಪಾತ್ಗೆ ನುಗ್ಗಿದ ಗೂಡ್ಸ್ ವಾಹನ: ಸಿಸಿಟಿವಿ ದೃಶ್ಯ - Goods Vehicle Accident