ಬೆಕ್ಕು ನುಂಗಿ ಬಲೆಗೆ ಸಿಲುಕಿದ್ದ ಹೆಬ್ಬಾವು ರಕ್ಷಣೆ: VIDEO - Python Rescue
🎬 Watch Now: Feature Video
Published : Jul 1, 2024, 7:25 PM IST
ಉಡುಪಿ: ಬೆಕ್ಕನ್ನು ನುಂಗಿದ್ದ ಹೆಬ್ಬಾವೊಂದು ತಡೆ ಬೇಲಿಗೆ ಹಾಕಿದ ಬಲೆಗೆ ಸಿಲುಕಿ ಒದ್ದಾಡ್ಡುತ್ತಿದ್ದ ಹೆಬ್ಬಾವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಉರಗ ತಜ್ಞ ರಕ್ಷಿಸಿದ್ದಾರೆ.
ಹೆರ್ಗ ಗ್ರಾಮದ ಪ್ರಸನ್ನ ಭಂಡಾರಿ ಅವರ ಮನೆಯಂಗಳದಲ್ಲಿದ್ದ ಸಾಕು ಬೆಕ್ಕನ್ನು ನುಂಗಿದ್ದ ಹೆಬ್ಬಾವು ಬೇಲಿ ದಾಟಿ ಹೋಗಲು ಪ್ರಯತ್ನಿಸಿದೆ. ಆದರೆ ಬಲೆ ಇದ್ದ ಕಾರಣ ಬಲೆಗೆ ಸಿಲುಕಿ ಪರದಾಡುತ್ತಿತ್ತು. ಇದನ್ನು ಗಮನಿಸಿದ ಮನೆಯವರು ಸ್ಥಳೀಯ ಉರಗ ರಕ್ಷಕ ಪ್ರಾಣೇಶ್ ಪರ್ಕಳ ಅವರಿಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ಉಪವಲಯ ಅರಣ್ಯಾಧಿಕಾರಿ ಸುರೇಶ್ ಗಾಣಿಗ ತಂಡದೊಂದಿಗೆ ಸ್ಥಳಕ್ಕಾಗಮಿಸಿದ ಪ್ರಾಣೇಶ್, ಬಲೆ ಕತ್ತರಿಸಿ ಹೆಬ್ಬಾವನ್ನು ರಕ್ಷಿಸಿದರು.
ಈ ವೇಳೆ ಹೆಬ್ಬಾವು ತೆವಳಲಾಗದೆ ದೇಹದ ತೂಕ ಇಳಿಸಲು ತನ್ನ ದೇಹದೊಳಗಿದ್ದ ಬೆಕ್ಕನ್ನು ವಾಂತಿ ಮಾಡಿದೆ. ಬಳಿಕ ಹೆಬ್ಬಾವಿಗೆ ಕೂಡಲೇ ಚಿಕಿತ್ಸೆ ಕೊಟ್ಟು ಅರಣ್ಯ ಇಲಾಖಾಧಿಕಾರಿಗಳು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಹೆಬ್ಬಾವಿನ ರಕ್ಷಣೆ ವಿಡಿಯೋದಲ್ಲಿ ಸೆರೆಯಾಗಿದೆ.
ಆಹಾರ ಅರಸಿಕೊಂಡು ಬಂದ ಹೆಬ್ಬಾವು ಬೆಕ್ಕನ್ನು ನುಂಗಿ ತಡೆಗೋಡೆಯ ಬೇಲಿಗೆ ಹಾಕಲಾಗಿದ್ದ ಬಲೆಗೆ ಸಿಲುಕಿಕೊಂಡ ಈ ಘಟನೆ ಶನಿವಾರ ನಡೆದಿತ್ತು.