ರಾಜ್ಯದ ಏಕೈಕ ಆಷಾಢ ರಥೋತ್ಸವಕ್ಕೆ ಸಿದ್ಧತೆ ಆರಂಭ: ಇದು ನವಜೋಡಿಗಳ ಜಾತ್ರೆ - Chamarajeshwara Rathotsava - CHAMARAJESHWARA RATHOTSAVA

🎬 Watch Now: Feature Video

thumbnail

By ETV Bharat Karnataka Team

Published : Jul 1, 2024, 3:00 PM IST

ಚಾಮರಾಜನಗರ: ಆಷಾಢ ಮಾಸದಲ್ಲಿ ನಡೆಯುವ ರಾಜ್ಯದ ಏಕೈಕ ಚಾಮರಾಜೇಶ್ವರ ರಥೋತ್ಸವಕ್ಕೆ ಸಿದ್ಧತೆ ಆರಂಭಗೊಂಡಿದ್ದು, ಶಾಸಕ ಸಿ. ಪುಟ್ಟರಂಗಶೆಟ್ಟಿ ರಥ ಕಟ್ಟುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ. ಆಷಾಢ ಮಾಸದಲ್ಲಿ ರಥೋತ್ಸವ ನಡೆಯುವುದು ಬಹಳ ಅಪರೂಪ ಮತ್ತು ವಿರಳವಾಗಿದ್ದು ರಾಜ್ಯದಲ್ಲಿ ಚಾಮರಾಜನಗರದಲ್ಲಿ ಮಾತ್ರ ಆಷಾಢದ ಜಾತ್ರೆ ನಡೆಯಲಿದೆ. ಇದೇ 20 ರಂದು ರಥೋತ್ಸವ ನಡೆಯಲಿದ್ದು, ಸಾಂಪ್ರದಾಯಿಕವಾಗಿ ತಯಾರಿ ಆರಂಭವಾಗಿದೆ.

ಚಾಮರಾಜೇಶ್ವರ ರಥೋತ್ಸವವು ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು, ಇದು ದಂಪತಿಗಳ ಜಾತ್ರೆ ಎಂದೇ ಜನಪ್ರಿಯವಾಗಿದೆ. ಮದುವೆಯಾದ ಹೊಸತರಲ್ಲಿ ಪತ್ನಿ ತವರಿನಲ್ಲಿ ಇರುವುದರಿಂದ ಈ ಜಾತ್ರೆಯ ದಿನದಂದು ಪತಿ-ಪತ್ನಿ ಭೇಟಿಯಾಗಿ ಹಣ್ಣು ಜವನ ಎಸೆದು ಪ್ರಾರ್ಥನೆ ಸಲ್ಲಿಸುವುದು ಇಲ್ಲಿನ‌ ವಿಶೇಷತೆ ಆಗಿದೆ. ತೇರು ಕಟ್ಟುವ ಕಾಯಕದಲ್ಲಿ ನುರಿತರು ಪಾಲ್ಗೊಂಡಿದ್ದು, ಈ ಬಾರಿ ಮಳೆ ಉತ್ತಮವಾಗಿ ಸುರಿಯುತ್ತಿರುವ ಹಿನ್ನೆಲೆ ಅದ್ಧೂರಿಯಾಗಿ ಜಾತ್ರೆ ಮಾಡಲು ಭಕ್ತರು ಅಣಿಯಾಗುತ್ತಿದ್ದಾರೆ.‌ ಈ ಜಾತ್ರೆಯಲ್ಲಿ ನವಜೋಡಿಗಳ ಕಲರವವೇ ಕೇಂದ್ರಬಿಂದುವಾಗಿದ್ದು ಚಾಮರಾಜನಗರದಲ್ಲಿ ಜಾತ್ರೆ ಕಳೆ ಬರುತ್ತಿದೆ.

ಇದನ್ನೂ ಓದಿ: ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಯವರ ಜೀವನ ಚರಿತ್ರೆ ಹೇಳುವ 'ಸ್ಮೃತಿವನ' - Siddaganga Smritivana

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.