ಕರ್ನಾಟಕ

karnataka

ETV Bharat / videos

ಬ್ರಿಟಿಷರ ಕಾಲದಲ್ಲಿನ ಸೀತಾರಾಮರ ಹಳೆಯ ನಾಣ್ಯ - ಅಯೋಧ್ಯೆ ರಾಮಮಂದಿರ

By ETV Bharat Karnataka Team

Published : Jan 20, 2024, 8:27 PM IST

ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಇದರ ನಡುವೆಯೇ ಬ್ರಿಟಿಷ್ ಈಸ್ಡ್ ಇಂಡಿಯಾ ಕಂಪನಿ ಕಾಲದ ರಾಮ ಸೀತೆಯ ನಾಣ್ಯ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. 1818ನೇ ಇಸವಿಯ ನಾಣ್ಯವು ರಾಮ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯನ ಒಳಗೊಂಡಿದೆ. ಈ ನಾಣ್ಯದ ಒಂದು ಭಾಗದಲ್ಲಿ ರಾಮ ಸೀತೆಯ ಭಾವಚಿತ್ರ ಇದ್ದು, ಮತ್ತೊಂದು ಭಾಗದಲ್ಲಿ ಯಕೆ ಹಾಫ್​ ಅಣ್ಣ ಎಂದು ನಮೂದು ಮಾಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಎನ್​ಆರ್​ ಪುರ ತಾಲೂಕಿನ ಬಾಳೆಹೊನ್ನೂರಿನ ಸುನೀಲ್ ಎಂಬುವರ ಮನೆಯಲ್ಲಿದೆ. ಈ ನಾಣ್ಯಕ್ಕೆ ಇಂದಿಗೂ ಪೂಜೆ ಮಾಡಲಾಗುತ್ತಿದೆ. ಅನಾದಿ ಕಾಲದಿಂದಲೂ ನಾಣ್ಯವನ್ನ ರಕ್ಷಣೆ ಮಾಡಿ ಪೂಜೆ ಮಾಡಿಕೊಂಡು ಸುನೀಲ್ ಕುಟುಂಬದವರು ಬರುತ್ತಿದ್ದಾರೆ. ಈ ಸೀತಾರಾಮರ ನಾಣ್ಯ ಸುಮಾರು 206 ವರ್ಷಗಳ ಹಳೆಯದಾಗಿದೆ. 50 ಗ್ರಾಂ ತೂಕವಿರುವ ಇದು ಇಂದಿಗೂ ತನ್ನ ಹೊಳಪನ್ನ ಕಳೆದು ಕೊಂಡಿಲ್ಲ. ಈ ಬಗ್ಗೆ ತಿಳಿಯುತ್ತಿದ್ದ ಹಾಗೆ ಜನರು ಮನೆಗೆ ಭೇಟಿ ನೀಡಿ ಈ ಅಪರೂಪದ ನಾಣ್ಯವನ್ನು ವೀಕ್ಷಣೆ ಮಾಡಿಕೊಂಡು ಹೋಗುತ್ತಿದ್ದಾರೆ.

ಇದನ್ನೂ ಓದಿ: ಶೌಚಾಲಯದ ಗುಂಡಿ ಅಗೆಯುವಾಗ ತಾಮ್ರದ ಪಾತ್ರೆಯಲ್ಲಿ ಚಿನ್ನದ ನಾಣ್ಯಗಳು ಪತ್ತೆ

ABOUT THE AUTHOR

...view details