ಕರ್ನಾಟಕ

karnataka

ETV Bharat / videos

ಶಿವಮೊಗ್ಗ: ಕುರುಬರ ಪಾಳ್ಯದಲ್ಲಿ ಏಳೂವರೆ ಕೆ.ಜಿ ತೂಕದ ಹೆಬ್ಬಾವು ಪ್ರತ್ಯಕ್ಷ - Python Rescued - PYTHON RESCUED

By ETV Bharat Karnataka Team

Published : Aug 6, 2024, 8:08 PM IST

Updated : Aug 6, 2024, 8:17 PM IST

ಶಿವಮೊಗ್ಗ: ಹುಲ್ಲಿನ ಬಣವೆಗಳಡಿ ಅವಿತಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಉರಗ ರಕ್ಷಕ ಸ್ನೇಕ್‌ ಕಿರಣ್‌ ರಕ್ಷಣೆ ಮಾಡಿದ್ದಾರೆ. ನಗರದ ಕುರುಬರ ಪಾಳ್ಯದಲ್ಲಿ ಹಾವು ಪತ್ತೆಯಾಗಿದೆ.

ಸುಶಾಂತ್​ ಎಂಬವರ ಮನೆ ಹಿಂಬದಿ ಹುಲ್ಲಿನ ಬಣವೆ ಇದ್ದು, ಜಾನುವಾರುಗಳಿಗೆ ಹುಲ್ಲು ತರಲು ಹೋದಾಗ ಹಾವು ಪ್ರತ್ಯಕ್ಷವಾಗಿದೆ. ಹಾವು ಯಾವುದೆಂದು ತಿಳಿಯದ ಕಾರಣ ಸುಶಾಂತ್​, ಉರಗ ರಕ್ಷಕ ಸ್ನೇಕ್‌ ಕಿರಣ್​ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. 

ಸ್ಥಳಕ್ಕಾಗಮಿಸಿದ ಸ್ನೇಕ್ ಕಿರಣ್ ಮೊದಲು ಹಾವನ್ನು ಪತ್ತೆ ಮಾಡಿದ್ದಾರೆ. ಕಾರ್ಯಾಚರಣೆ ನಡೆಸಿ ಸುಮಾರು ಏಳೂವರೆ ಕೆ.ಜಿ ಗಾತ್ರದ ಹೆಬ್ಬಾವನ್ನು ರಕ್ಷಿಸಿದರು. ಬಳಿಕ ಶಂಕರ ವಲಯ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಸಮೀಪದ ಅರಣ್ಯಕ್ಕೆ ಬಿಟ್ಟರು.

ಇದನ್ನೂ ಓದಿ: ಬೆಕ್ಕು ನುಂಗಿ ಬಲೆಗೆ ಸಿಲುಕಿದ್ದ ಹೆಬ್ಬಾವು ರಕ್ಷಣೆ: VIDEO - Python Rescue

ಮನೆ ಹಿತ್ತಲಿನಲ್ಲಿ 13 ಅಡಿ ಉದ್ದದ ಹೆಬ್ಬಾವು (ತುಮಕೂರು): ಇತ್ತೀಚಿಗೆ, ಮನೆ ಹಿತ್ತಲಿನಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ 13 ಅಡಿ ಉದ್ದದ ಹೆಬ್ಬಾವನ್ನು ಉರಗತಜ್ಞ ದಿಲೀಪ್ ಸೆರೆಹಿಡಿದು ದೇವರಾಯನದುರ್ಗ ಅರಣ್ಯಕ್ಕೆ ಬಿಟ್ಟಿದ್ದರು. ತುಮಕೂರು ತಾಲೂಕು ಅಯ್ಯನಪಾಳ್ಯ ಗ್ರಾಮದ ಪುಟ್ಟಯ್ಯ ಎಂಬವರ ಮನೆ ಹಿತ್ತಲಿನಲ್ಲಿ ಹೆಬ್ಬಾವು ಕಂಡುಬಂದಿತ್ತು. ಹುಲ್ಲು ಕೊಯ್ಯಲು ಹೋದ ಪುಟ್ಟಯ್ಯ ಹೆಬ್ಬಾವನ್ನು ಕಂಡು ಭಯಭೀತರಾಗಿದ್ದರು. ತಕ್ಷಣ ತುಮಕೂರಿನ ವಾರಂಗಲ್ ವನ್ಯಜೀವಿ ಜಾಗೃತ ಹಾಗೂ ಉರಗ ರಕ್ಷಣಾ ಸಂಸ್ಥೆಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಉರಗತಜ್ಞ ದಿಲೀಪ್ ಮತ್ತು ಹನುಮಯ್ಯ ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ 13 ಅಡಿ ಉದ್ದದ ಹೆಬ್ಬಾವನ್ನು ಸೆರೆಹಿಡಿದಿದ್ದರು.

Last Updated : Aug 6, 2024, 8:17 PM IST

ABOUT THE AUTHOR

...view details