ಕರ್ನಾಟಕ

karnataka

ETV Bharat / videos

ಫಸ್ಟ್‌ ಟೈಂ ವೋಟ್‌ ಮಾಡಿದ ಅನುಭವ ಹೇಗಿತ್ತು? ಯುವತಿಯರ ಮಾತು ಕೇಳಿ - First Time Voters Experience - FIRST TIME VOTERS EXPERIENCE

By ETV Bharat Karnataka Team

Published : May 8, 2024, 2:25 PM IST

ಶಿವಮೊಗ್ಗ: ಮೊದಲ ಬಾರಿ ಮತದಾನ ಮಾಡಿದ ಯುವಜನತೆ ಸಂತೋಷಪಟ್ಟಿದ್ದಾರೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿರುವ ಕುರಿತು ತಮ್ಮ ಅಭಿಪ್ರಾಯವನ್ನು 'ಈಟಿವಿ ಭಾರತ' ಜೊತೆ ಹಂಚಿಕೊಂಡಿದ್ದಾರೆ.

ಯುವತಿ ಭಾವನಾ ಮಾತನಾಡಿ, ''ನಾನು ಶಿವಮೊಗ್ಗದವಳೇ. ಕೋಚಿಂಗ್​ಗೆಂದು ಬೆಂಗಳೂರಿಲ್ಲಿದ್ದೆ. ಮತದಾನ ಮಾಡಬೇಕೆಂದು ಶಿವಮೊಗ್ಗಕ್ಕೆ ಬಂದಿದ್ದೇನೆ. ಮೊದಲ ಬಾರಿಗೆ ಮತದಾನ ಮಾಡಿರುವುದು ತುಂಬಾ ಖುಷಿ ತಂದಿದೆ. ಎಲ್ಲರೂ ಮತ ಚಲಾಯಿಸಬೇಕು. ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕನ್ನು ನೀಡಲಾಗಿದೆ. ಅದನ್ನು ನಾವು ಬಳಸಿಕೊಳ್ಳಬೇಕು. ಒಬ್ಬ ಲೀಡರ್ ಆಯ್ಕೆ ಮಾಡುವ ಅಧಿಕಾರ ಕೊಟ್ಟಿದ್ದಾರೆ. ಅದನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕು'' ಎಂದರು.

ದಿವ್ಯಾ ಪ್ರತಿಕ್ರಿಯಿಸಿ, ''ನಾನು ಪ್ರಥಮ ಬಾರಿಗೆ ವೋಟ್​ ಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ. ಎಲ್ಲಾ ಯುವಕರು, ಹಿರಿಯರು ದೇಶದ ಅಭಿವೃದ್ಧಿಗಾಗಿ ಮತದಾನ ಮಾಡಲೇಬೇಕು. ಮತದಾನ ನಮಗೆ ಸಿಕ್ಕಿರುವ ಅವಕಾಶ. ಎಲ್ಲರೂ ಮತದಾನ ಮಾಡಿ ದೇಶದ ಅಭಿವೃದ್ಧಿಗೆ ಸಹಕರಿಸಿ" ಎಂದು ವಿನಂತಿಸಿಕೊಂಡರು.

ಎಂಜಿನಿಯರಿಂಗ್ ವಿದ್ಯಾರ್ಥಿನಿ ಚಂದನಾ ಮಾತನಾಡಿ, ''ನಾನು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದೇನೆ‌. ಈ ಚುನಾವಣೆಯಲ್ಲಿ ನನಗೆ ಮೊದಲ ಸಲ‌ ಮತದಾನ ಮಾಡುವ ಅವಕಾಶ ಸಿಕ್ಕಿದೆ. ದೇಶದ ಅಭಿವೃದ್ಧಿಗಾಗಿ ಮತ ಹಾಕಲು ಅವಕಾಶ ಸಿಕ್ಕಿರುವುದು ಸಂತಸವಾಗಿದೆ. ಎಲ್ಲರೂ ಮತದಾನದ ಹಕ್ಕು ಚಲಾಯಿಸಿಬೇಕು'' ಎಂದು ಹೇಳಿದರು.

ABOUT THE AUTHOR

...view details