ಕರ್ನಾಟಕ

karnataka

ETV Bharat / videos

LIVE ಮೈಸೂರು ಯುವ ದಸರಾ: ಅಶ್ವಿನಿ ಪುನೀತ್ ರಾಜ್​ಕುಮಾರ್​ರಿಂದ ಉದ್ಘಾಟನೆ, ಶ್ರೇಯಾ ಘೋಷಾಲ್​ ಗಾನ ಸುಧೆ - Yuva Dasara - YUVA DASARA

By ETV Bharat Karnataka Team

Published : Oct 6, 2024, 7:37 PM IST

Updated : Oct 6, 2024, 8:52 PM IST

ಮೈಸೂರು: ದಸರಾ ಮಹೋತ್ಸವ ಕಾರ್ಯಕ್ರಮಗಳಲ್ಲಿ ಒಂದಾದ ಯುವ ದಸರಾಗೆ ಚಿತ್ರನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಚಾಲನೆ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಗಾಯಕಿ ಶ್ರೇಯಾ ಘೋಷಾಲ್ ಅವರು ಗಾನಸುಧೆ ಹರಿಸಲಿದ್ದಾರೆ. ಕಾರ್ಯಕ್ರಮದ ನೇರ ಪ್ರಸಾರ ಇಲ್ಲಿದೆ.ಮೈಸೂರಿನ ಹೊರವಲಯದ ಉತ್ತನಹಳ್ಳಿ ಬಳಿಯ ತ್ರಿಪುರಸುಂದರಿ ಜ್ವಾಲಾಮುಖಿ ದೇವಸ್ಥಾನದ ಸಮೀಪದ ಮೈದಾನದಲ್ಲಿ ಆರು ದಿನಗಳ ಯುವ ದಸರಾ ಇಂದಿನಿಂದ ಆರಂಭವಾಗಿದೆ. ಯುವ ದಸರಾ ಕಾರ್ಯಕ್ರಮಗಳು ಯುವಜನತೆಯನ್ನು ಕುಣಿದು ಕುಪ್ಪಳಿಸುವಂತೆ ಮಾಡಲಿದೆ.ಇಂದು ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರ ತಂಡದಿಂದ 'ಬಾಲಿವುಡ್ ನೈಟ್ಸ್, ನಾಳೆ ಖ್ಯಾತ ಸಂಗೀತ ಸಂಯೋಜಕ ರವಿ ಬಸ್ರೂರು ತಂಡದಿಂದ ರಸಸಂಜೆ ಹಾಗೂ ಸ್ಯಾಂಡಲ್‌ವುಡ್ ನೈಟ್ಸ್, ಅ.8ರಂದು ಖ್ಯಾತ ರಾಪರ್ ಬಾದ್ ಷಾ ಹಾಗೂ ತಂಡದವರಿಂದ ಸಂಗೀತ ರಸಸಂಜೆ, ಅ.9ರಂದು ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಹಾಗೂ ತಂಡದಿಂದ ಸಂಗೀತ ರಸಸಂಜೆ, ಅ.10ರಂದು ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.90 ಸಾವಿರದಿಂದ 1ಲಕ್ಷ ಜನ ಕಾರ್ಯಕ್ರಮ ವೀಕ್ಷಿಸಬಹುದಾಗಿದ್ದು, ಕೇವಲ 5 ಸಾವಿರ ಟಿಕೆಟ್​ ಮಾರಾಟ ಮಾಡಲಾಗುತ್ತದೆ. ಉಳಿದಂತೆ, 90 ಸಾವಿರ ಜನ ಯಾವುದೇ ಟಿಕೆಟ್​ ಇಲ್ಲದೆ ಉಚಿತವಾಗಿ ಕಾರ್ಯಕ್ರಮ ವೀಕ್ಷಿಸಬಹುದು. ಸಾರ್ವಜನಿಕರ ಅನುಕೂಲಕ್ಕಾಗಿ ನಗರ ಹಾಗೂ ಗ್ರಾಮಾಂತರ ಬಸ್​ ನಿಲ್ದಾಣದಿಂದ 200-250 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
Last Updated : Oct 6, 2024, 8:52 PM IST

ABOUT THE AUTHOR

...view details