ಕರ್ನಾಟಕ

karnataka

ETV Bharat / videos

ಶ್ರೀನಿವಾಸ ಪ್ರಸಾದ್ ಈಗ ಬಿಜೆಪಿಯಲ್ಲಿಲ್ಲ, ಕಾಂಗ್ರೆಸ್​ನಲ್ಲಿದ್ದಾರೆ: ಶಾಸಕ ಪುಟ್ಟರಂಗಶೆಟ್ಟಿ - MLA Puttarangashetty - MLA PUTTARANGASHETTY

By ETV Bharat Karnataka Team

Published : Apr 7, 2024, 6:18 PM IST

ಚಾಮರಾಜನಗರ: ಹಾಲಿ ಬಿಜೆಪಿ ಸಂಸದ ವಿ‌.ಶ್ರೀನಿವಾಸ ಪ್ರಸಾದ್ ಬಿಜೆಪಿಯಲ್ಲಿಲ್ಲ, ಅವರು ಈಗ ಕಾಂಗ್ರೆಸ್​ನಲ್ಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಸಿ‌‌‌.ಪುಟ್ಟರಂಗಶೆಟ್ಟಿ ಹೇಳಿದರು. ಚಾಮರಾಜನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ಸಂಸದರು ಆಗ ಹೋಗಬೇಕಿತ್ತು, ಹೋಗಿದ್ದರು. ಆದರೆ, ಅವರಿಗೆ ಬಿಜೆಪಿ ಸಿದ್ಧಾಂತ ಹಿಡಿಸಿಲ್ಲ. ಆದರೆ, ಖಂಡಿತವಾಗಿಯೂ ಈಗ ಪ್ರಸಾದ್ ಅವರು ಬಿಜೆಪಿಯಲ್ಲಿಲ್ಲ ಎಂದರು. 

ಸಂಸದರ ಬಹುಪಾಲು ಬೆಂಬಲಿಗರು ಕಾಂಗ್ರೆಸ್​ಗೆ ಬಂದಿದ್ದಾರೆ. ಕಾಂಗ್ರೆಸ್‌ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇವೆ. ಬಿಜೆಪಿಯವರಂತೆ ಸುಳ್ಳು ಹೇಳಿ ಮತ ಕೇಳುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಏಪ್ರಿಲ್​ 12ರಂದು ಕೊಳ್ಳೇಗಾಲಕ್ಕೆ ಭೇಟಿ ನೀಡಲಿದ್ದಾರೆ. ಗುಂಡ್ಲುಪೇಟೆಯಲ್ಲೂ ಸಮಾವೇಶ ನಡೆಸುವ ಸಾಧ್ಯತೆ ಇದೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್​ ಅಭ್ಯರ್ಥಿ ವಿರುದ್ಧ ದೂರು: ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವಿವಾಹಿತರೆಂದು ಸುಳ್ಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ಜಿಲ್ಲಾ ಚುನಾವಣಾಧಿಕಾರಿಗೆ ಬಿಜೆಪಿ ಮುಖಂಡರು ದೂರು ನೀಡಿದ್ದರು. ಏ.3ರಂದು ಚಾಮರಾಜನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಸುನೀಲ್ ಬೋಸ್ ನಾಮಪತ್ರ ಸಲ್ಲಿಸಿದ್ದರು. ಅಫಿಡವಿಟ್​ನಲ್ಲಿ ಪತ್ನಿ, ಅವಲಂಬಿತರು ಯಾರೂ ಇಲ್ಲ ಎಂದು ನಮೂದಿಸಿದ್ದಾರೆ ಎಂದು ಬಿಜೆಪಿ ದೂರಿನಲ್ಲಿ ಉಲ್ಲೇಖಿಸಿತ್ತು.

ಇದನ್ನೂ ಓದಿ: ಮದ್ಯಪ್ರಿಯರಿಗೆ ಮತದಾನ‌ ಜಾಗೃತಿ: ರಾಜಕಾರಣಿಗಳ ಮದ್ಯದಂಗಡಿಗಳ ಮೇಲೆ ಕಟ್ಟೆಚ್ಚರ - Voting Awareness

ABOUT THE AUTHOR

...view details