ಚೋಳೋನಹಳ್ಳಿ ಕೆರೆಯಲ್ಲಿ ಸಚಿವ ಕೆ. ಎನ್. ರಾಜಣ್ಣ ಬೋಟಿಂಗ್ - MINISTER KN RAJANNA BOATING
Published : Jan 30, 2025, 3:49 PM IST
ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ಚೋಳೋನಹಳ್ಳಿ ಕೆರೆಯಲ್ಲಿ ಕಳೆದ 24ರಂದು ಅದ್ಧೂರಿ ತೆಪ್ಪೋತ್ಸವ ನಡೆದಿದ್ದು, ಇದೇ ಕೆರೆಯಲ್ಲಿ ಇದೀಗ ಸಹಕಾರ ಸಚಿವ ಕೆ. ಎನ್. ರಾಜಣ್ಣ ಅವರು 15 ದಿನಗಳ ಬೋಟಿಂಗ್ಗೆ ಚಾಲನೆ ನೀಡಿದ್ದಾರೆ. ಚಾಲನೆ ನೀಡಿದ ಬಳಿಕ ತಾವೂ ಕೂಡ ಕೆರೆಯಲ್ಲಿ ಬೋಟಿಂಗ್ ಮಾಡಿದರು.
ಸಚಿವರು ಕೆರೆಯನ್ನು ಖುದ್ದಾಗಿ ಪರಿಶೀಲಿಸಿ, ಏರಿಯನ್ನು ಅಗಲೀಕರಣಗೊಳಿಸುವುದು, ಬಂದೋಬಸ್ತ್ ವ್ಯವಸ್ಥೆ ಮಾಡುವುದು ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನರ ಪ್ರತಿಕ್ರಿಯೆಯನ್ನು ಆಧರಿಸಿ, ಭವಿಷ್ಯದಲ್ಲಿ ಈ ಕೆರೆಯಲ್ಲಿ ಶಾಶ್ವತ ಬೋಟಿಂಗ್ ವ್ಯವಸ್ಥೆಯನ್ನು ಸ್ಥಾಪಿಸುವ ಬಗ್ಗೆಯೂ ಚಿಂತನೆ ನಡೆಸಿದರು. ಸ್ಥಳೀಯರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಹಯೋಗದೊಂದಿಗೆ ಕೆರೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಯೋಜನೆಯನ್ನು ಸಚಿವರು ಹಾಕಿಕೊಂಡಿದ್ದಾರೆ. ಇದೇ ವೇಳೆ ಕೆರೆಯಲ್ಲಿ ಬೋಟಿಂಗ್ ಮಾಡಿ ಜಾಲಿ ಮೂಡ್ನಲ್ಲಿ ಸಚಿವ ರಾಜಣ್ಣ ಸುತ್ತಾಡಿದರು. ಈ ವೇಳೆ ಸ್ಥಳೀಯ ಅಧಿಕಾರಿಗಳು ಸಚಿವರಿಗೆ ಸಾಥ್ ನೀಡಿದರು.
ಇದನ್ನೂ ನೋಡಿ: ಬಂಡೀಪುರದಲ್ಲಿ ಲಾರಿ ಮೇಲೆ ಕಾಡಾನೆ ದಾಳಿ : ಬೈಕ್ ಬಿಟ್ಟು ಓಡಿದ ಸವಾರರು