ಕರ್ನಾಟಕ

karnataka

ETV Bharat / videos

ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ, ಅಲ್ಲೇ ಊಟ ಮಾಡಿದರು! ವಿಡಿಯೋ ನೋಡಿ - Lunch In Graveyard - LUNCH IN GRAVEYARD

By ETV Bharat Karnataka Team

Published : Aug 21, 2024, 11:00 PM IST

ಹಾವೇರಿ: ಮೌಢ್ಯತೆ ನಿವಾರಣೆಗೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮಾನವ ಬಂಧುತ್ವ ವೇದಿಕೆ ವಿಭಿನ್ನ ಪ್ರಯತ್ನ ಮಾಡಿದೆ. ಹೌದು, ತಾಲೂಕಿನ ಮುಷ್ಟೂರು ಗ್ರಾಮದ ಸ್ಮಶಾನದಲ್ಲಿ ಶವ ದಹಿಸುತ್ತಿರುವ ವೇಳೆ ವೇದಿಕೆಯ ಸದಸ್ಯರು ಊಟ ಮಾಡಿದ್ದಾರೆ.

ಮುಷ್ಟೂರು ಗ್ರಾಮದ 73 ವರ್ಷ ವಯಸ್ಸಿನ ಲಕ್ಷ್ಮಪ್ಪ ಮುಷ್ಟೂರು ನಾಯ್ಕರ ಮೃತರಾಗಿದ್ದರು. ಮೃತನ ಅಂತ್ಯಕ್ರಿಯೆಗೆ ಬಂದವರಿಗೆ ವೇದಿಕೆ ಸ್ಮಶಾನದಲ್ಲಿ ಊಟದ ವ್ಯವಸ್ಥೆ‌ ಮಾಡಿತ್ತು. ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಿದ ವೇಳೆಯೇ ಅನ್ನ, ಸಾಂಬಾರ್​ ತಯಾರಿಸಿದ್ದಾರೆ. ಈ ಮೂಲಕ ಮಾನವ ಬಂಧುತ್ವ ವೇದಿಕೆ, ಸ್ಮಶಾನದಲ್ಲಿ ಊಟ ಮಾಡುವುದರಿಂದ ಏನೂ ಆಗುವುದಿಲ್ಲ ಎಂಬ ಸಂದೇಶ ಸಾರಿದೆ. 

ಈ ಕುರಿತು ಮೃತನ ಸಂಬಂಧಿ ರವೀಂದ್ರಗೌಡ ಪಾಟೀಲ ಮಾತನಾಡಿ, "ಸ್ಮಶಾನದಲ್ಲಿ ಮದುವೆ ಮಾಡುವುದರಿಂದ, ಊಟ ಮಾಡುವುದರಿಂದ ಅತ್ಯಂತ ಪರಿಣಾಮಕಾರಿಯಾಗಿ ಮೂಢ ನಂಬಿಕೆ ತೊಲಗಿಸಬಹುದಾಗಿದೆ. ನಾವು ಮೃತಪಟ್ಟ ವ್ಯಕ್ತಿಯ ದೇಹವನ್ನು ದಹನ ಮಾಡುವ ಸಂದರ್ಭದಲ್ಲಿಯೇ ದುಃಖದಲ್ಲಿರುವ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿ, ಅವರಿಗೆ ಸ್ಮಶಾನದಲ್ಲಿಯೇ ಊಟ ಮಾಡಿಸಿ ದುಃಖ ದೂರ ಮಾಡಿಸುವ ಮೂಲಕ ಸ್ಮಶಾನದ ಬಗ್ಗೆ ಇರುವ ದಂತಕಥೆಗಳಿಗೆ ತಿಲಾಂಜಲಿ ಇಟ್ಟು ಜನಜಾಗೃತಿ ಮೂಡಿಸಿದ್ದೇವೆ" ಎಂದು ಹೇಳಿದರು.

ಇದನ್ನೂ ಓದಿ: ಚಾರ್ಮಾಡಿ ಘಾಟ್​ ರಸ್ತೆಯಲ್ಲಿ ಪ್ರವಾಹದ ರೀತಿ ಹರಿದ ಮಳೆ ನೀರು: ವಿಡಿಯೋ - Charmadi Ghat

ABOUT THE AUTHOR

...view details