ಬಸ್ ನಿಲ್ದಾಣದಲ್ಲಿ ಗುಟ್ಕಾ ತಿಂದು ಉಗಿದ ವ್ಯಕ್ತಿ; ಆತನಿಂದಲೇ ಸ್ವಚ್ಛ ಮಾಡಿಸಿದ ಪಿಎಸ್‌ಐ
Published : Oct 15, 2024, 9:32 PM IST
ಚಿಕ್ಕಮಗಳೂರು: ಬಾಯಿಗೆ ಎಲೆ ಅಡಿಕೆ ಹಾಕಿಕೊಂಡು ಅಥವಾ ಗುಟ್ಕಾ/ಪಾನ್ ಹಾಕಿಕೊಂಡು ಎಲ್ಲಿ ಬೇಕೋ ಅಲ್ಲಿ ಉಗಿಯುವ ಜನರಿಗೆ ಜಿಲ್ಲೆಯ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಕೊಪ್ಪ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಇಂಥದ್ದೊಂದು ಘಟನೆ ನಡೆಯಿತು.
ಗುಟ್ಕಾ ಹಾಕಿಕೊಂಡು ಉಗಿದ ವ್ಯಕ್ತಿಯನ್ನು ಪಿಎಸ್ಐ ಬಸವರಾಜ್ ತನ್ನ ಬಳಿಗೆ ಕರೆದು ಉಗಿದ ಗುಟ್ಕಾವನ್ನು ಸ್ವಚ್ಛಗೊಳಿಸುವಂತೆ ತಾಕೀತು ಮಾಡಿದರು. ಆಗ ಆ ವ್ಯಕ್ತಿ ಬಿಸ್ಲೆರಿ ನೀರು ತಂದು ರಸ್ತೆಗೆ ಸುರಿದು ರಸ್ತೆಯನ್ನು ಸ್ವಚ್ಛಗೊಳಿಸಿದ್ದಾರೆ.
ಬಳಿಕ, ಎಲ್ಲೆಂದರಲ್ಲಿ ಗುಟ್ಕಾ ತಿಂದು ಉಗಿಯದಂತೆ ಪಿಎಸ್ಐ ಎಚ್ಚರಿಕೆ ನೀಡಿದರು. ಮೊದಲ ಬಾರಿಗೆ ಈ ರೀತಿ ಮಾಡಿದ ಕಾರಣ ಕ್ಷಮಿಸುತ್ತಿದ್ದೇನೆ. ಇಂಥ ವರ್ತನೆ ಮರುಕಳಿಸಿದರೆ ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಯಾರೇ ಆಗಲಿ ಗುಟ್ಕಾ ಹಾಕಿಕೊಂಡು ಎಲ್ಲಿ ಬೇಕೋ ಅಲ್ಲಿ ಉಗಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಹಾಗಾಗಿ, ಈ ರೀತಿ ಯಾರೂ ಮಾಡಬೇಡಿ ಎಂದು ಅವರು ಮನವಿ ಮಾಡಿದರು.
ಇದನ್ನೂ ಓದಿ: ಮಂಗಳೂರಿನಲ್ಲಿ ಗುಟ್ಕಾ ಜಗಿಯುತ್ತಾ ಬಸ್ ಚಾಲನೆ : ಇಬ್ಬರು ಚಾಲಕರಿಗೆ ತಲಾ 5000 ರೂ. ದಂಡ