ಬಿಜೆಪಿ ಆರ್ಎಸ್ಎಸ್ ವಿಷವಿದ್ದಂತೆ: ಮಲ್ಲಿಕಾರ್ಜುನ ಖರ್ಗೆ ಆರೋಪ - ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ
Published : Jan 29, 2024, 10:01 PM IST
ಭುವನೇಶ್ವರ್ (ಒಡಿಶಾ): ಬಿಜೆಪಿ ಆರ್ಎಸ್ಎಸ್ ವಿಷವಿದ್ದಂತೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ಇಂದು ಒಡಿಶಾಗೆ ಭೇಟಿ ನೀಡಿದ ಅವರು, 'ಒಡಿಶಾ ಬಚಾವೋ' ಸಮಾವೇಶದಲ್ಲಿ ಭಾಗಿಯಾಗಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಆರ್ಎಸ್ಎಸ್ ಮತ್ತು ಬಿಜೆಪಿ ವಿಷವಿದ್ದಂತೆ. ಒಂದೊಂದಾಗೇ ನಮ್ಮ ಹಕ್ಕಗಳನ್ನು ಕಿತ್ತುಕೊಳ್ಳುತ್ತಿವೆ. ಮಣಿಪುರ ಹಿಂಸಾಚಾರದಲ್ಲಿ ಈ ವರೆಗೂ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಮಹಿಳೆಯರ ಅತ್ಯಾಚಾರವಾಗುತ್ತಿದೆ, ಮನೆಗಳು, ವಾಹನಗಳು ಹೊತ್ತಿ ಉರಿಯುತ್ತಿವೆ. ಎಲ್ಲಿದ್ದಾರೆ ಮೋದಿ, ಎಲ್ಲಿದೆ ಬಿಜೆಪಿ ಎಂದು ವಾಗ್ದಾಳಿ ನಡೆಸಿದರು.
ಇಂದು ಶಿಕ್ಷಣ, ಆಸ್ಪತ್ರೆ ಸೇರಿದಂತೆ ವಿವಿಧ ಕ್ಷೇತ್ರಗಳು ಅಭಿವೃದ್ದಿ ಆಗಿವೆ ಎಂದರೆ ಅದು ಕಾಂಗ್ರೆಸ್ನಿಂದ ಮಾತ್ರ. ಈಗಿನ ಬಿಜೆಪಿ ಸರ್ಕಾರ ಜನರ ಮಧ್ಯ ಗಲಾಟೆ ಸೃಷ್ಟಿಸಿ ತಮಾಷೆ ನೋಡುತ್ತಿದೆ ಎಂದು ಕಿಡಿಕಾರಿರು. ನವೀನ್ ಪಟ್ನಾಯಕ್ ಅವರು ನರೇಂದ್ರ ಮೋದಿಯವರೊಂದಿಗಿನ ಸ್ನೇಹದಿಂದ ಏನು ಗಳಿಸಿದರು? ಡಬಲ್ ಎಂಜಿನ್ ಕೆಲವೊಮ್ಮೆ ವಿಫಲಗೊಳ್ಳುತ್ತದೆ ಮತ್ತು ಡಬಲ್ ಎಂಜಿನ್ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಮೊದಲ ಎಂಜಿನ್ ಸಹ ವಿಫಲಗೊಳ್ಳುತ್ತದೆ ಎಂದು ಹರಿಹಾಯ್ದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಖರ್ಗೆ ಅವರು ಮೊದಲ ಬಾರಿಗೆ ಒಡಿಶಾಗೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ, ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ನಾಮಪತ್ರ ಸಲ್ಲಿಕೆ