ಡಿಸಿ ಅನುಮತಿ ನಿರಾಕರಿಸಿದರೂ ಮಹಿಷಾ ದಸರಾ ಆಚರಿಸಿದ ದಲಿತ ಪರ ಸಂಘಟನೆಗಳು
Published : 6 hours ago
ಚಿಕ್ಕಮಗಳೂರು: ಜಿಲ್ಲಾಧಿಕಾರಿ ಅನುಮತಿ ನಿರಾಕರಿಸಿದರೂ ವಿವಿಧ ದಲಿತ ಪರ ಸಂಘಟನೆಗಳು ಚಿಕ್ಕಮಗಳೂರು ನಗರದಲ್ಲಿ ಇಂದು ಮಹಿಷಾ ದಸರಾ ಆಚರಿಸಿದರು. ಆಜಾದ್ ಪಾರ್ಕ್ ವೃತ್ತದಲ್ಲಿ ಮಹಿಷಾ ದಸರಾ ಆಚರಣೆಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವಕಾಶ ನೀಡಿರಲಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಸಂಘಟನೆಯ ಇಬ್ಬರಿಗೆ ನೋಟಿಸ್ ಕೂಡಾ ಜಾರಿ ಮಾಡಿದ್ದರು. ಆದರೆ, ಇಂದು ಆಜಾದ್ ಪಾರ್ಕ್ ವೃತ್ತದಲ್ಲಿ 25ಕ್ಕೂ ಹೆಚ್ಚು ದಲಿತ ಮುಖಂಡರು ಮಹಿಷಾಸುರನ ಬ್ಯಾನರ್ಗೆ ಪುಷ್ಪಾರ್ಚನೆ ಮಾಡಿ ಜೈಕಾರ ಕೂಗಿದರು.
ಮಹಿಷಾ ರಾಜನಿಂದಲೇ ಮೈಸೂರಿಗೆ ಮೈಸೂರು ಅಂತ ಹೆಸರು ಬಂದಿದೆ. ಆತ ಬೌದ್ಧ ಧರ್ಮದ ಪ್ರಚಾರಕನಾಗಿದ್ದ. ಆದಿವಾಸಿ ಮಹಾರಾಜನ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ. ಖಾದಿ, ಕಾವಿ ಹಾಗೂ ಕಿಡಿಗೇಡಿಗಳಿಂದ ಮಹಿಷಾ ದಸರಾ ಆಚರಣೆಗೆ ವಿರೋಧ ವ್ಯಕ್ತವಾಗುತ್ತಿದೆ. ಈ ಆಚರಣೆಯನ್ನು ಪ್ರತಿ ವರ್ಷವೂ ಮಾಡೇ ತೀರುತ್ತೇವೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಂಘಟೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಮುನ್ನೆಚ್ಚರಿಕಾ ಕ್ರಮವಾಗಿ 25ಕ್ಕೂ ಹೆಚ್ಚು ಸಬ್ಇನ್ಸ್ಪೆಕ್ಟರ್ ಸೇರಿ ನೂರಕ್ಕೂ ಹೆಚ್ಚು ಪೊಲೀಸರು ನಗರದಾದ್ಯಂತ ಬಿಗಿ ಬಂದೋಬಸ್ತ್ ವಹಿಸಿದ್ದರು.
ಇದನ್ನೂ ಓದಿ: ಮದುವೆಗೆ ವಧು ಸಿಗುತ್ತಿಲ್ಲವೆಂದು ಮಾದಪ್ಪನ ಬೆಟ್ಟಕ್ಕೆ ಹೊರಟ ಯುವಕರ ದಂಡು