ಕರ್ನಾಟಕ

karnataka

ETV Bharat / videos

LIVE: ಲೋಕಸಭೆ ಅಧಿವೇಶನ: ಸಂವಿಧಾನದ ಮೇಲಿನ ವಿಶೇಷ ಚರ್ಚೆ; ವಿಪಕ್ಷ ನಾಯಕ ರಾಹುಲ್​ ಗಾಂಧಿ ಭಾಷಣ - LOK SABHA SESSION

By ETV Bharat Karnataka Team

Published : Dec 14, 2024, 1:36 PM IST

ನವದೆಹಲಿ: ದೇಶದ ಸಂವಿಧಾನದ 75ನೇ ವಾರ್ಷಿಕೋತ್ಸವದ ನಿಮಿತ್ತ ಲೋಕಸಭೆಯಲ್ಲಿ ನಡೆಯುತ್ತಿರುವ ವಿಶೇಷ ಚರ್ಚೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮಹತ್ವದ ಭಾಷಣ ಮಾಡಲಿದ್ದಾರೆ. ಸಂವಿಧಾನದ ಕುರಿತು ಪ್ರತಿಪಕ್ಷದ ನಾಯಕರು ವ್ಯಕ್ತಪಡಿಸಿರುವ ಕಳವಳಕ್ಕೆ ಪ್ರಧಾನಿ ಮೋದಿ ತಕ್ಕ ಉತ್ತರ ನೀಡುವ ನಿರೀಕ್ಷೆ ಇದೆ. ಶುಕ್ರವಾರ (ಡಿಸೆಂಬರ್ 13) ಆರಂಭವಾದ ಎರಡು ದಿನಗಳ ಚರ್ಚೆಯಲ್ಲಿ ಸಂವಿಧಾನದ ಐತಿಹಾಸಿಕ ಮತ್ತು ಸಮಕಾಲೀನ ಮಹತ್ವದ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆದಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚರ್ಚೆಯನ್ನು ಪ್ರಾರಂಭಿಸಿದರು, ಸಂವಿಧಾನದ ರಚನೆಯ ಹಿಂದಿನ ಸಾಮೂಹಿಕ ಪ್ರಯತ್ನ ಹಾಗೂ ಭಾರತದ ನಾಗರಿಕತೆಯ ಕುರಿತಂತೆ ಒತ್ತಿ ಹೇಳಿದ್ದರು. ಸಂವಿಧಾನದ ಪರಂಪರೆಯನ್ನು ರಾಜಕೀಯಗೊಳಿಸುವ ಪ್ರಯತ್ನಗಳನ್ನು ಬಲವಾಗಿ ಟೀಕಿಸಿದ್ದ ಅವರು, 'ನಮ್ಮ ಸಂವಿಧಾನವು ಒಂದೇ ಪಕ್ಷದ ಕೊಡುಗೆಯಲ್ಲ; ಇದು ಭಾರತದ ಜನತೆಯ ಮೌಲ್ಯಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ' ಎಂದು ಪ್ರತಿಪಾದಿಸಿದ್ದರು. ಬಳಿಕ ಸಂಸತ್​ನಲ್ಲಿ ಚೊಚ್ಚಲ ಭಾಷಣ ಮಾಡಿದ್ದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಕಳೆದ ದಶಕದಲ್ಲಿ ಆಡಳಿತ ಸರ್ಕಾರವು ಸಂವಿಧಾನದ ಭರವಸೆಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದರು. ನಮ್ಮ ಸಂವಿಧಾನವು ನ್ಯಾಯ, ಏಕತೆ ಮತ್ತು ಮುಕ್ತ ಅಭಿವ್ಯಕ್ತಿಗೆ ನಾಗರಿಕರ ಹಕ್ಕುಗಳನ್ನು ರಕ್ಷಿಸುವ ‘ಸುರಕ್ಷಾ ಕವಚ’ವಾಗಿದೆ. ಆದರೆ ಕಳೆದ 10 ವರ್ಷಗಳಲ್ಲಿ, ಈ ಸರ್ಕಾರವು ಈ ‘ಕವಚ’ವನ್ನು ಒಡೆಯುವ ಕೆಲಸ ಮಾಡಿದೆ,” ಎಂದು ಆರೋಪ ಮಾಡಿದ್ದರು. ಲೋಕಸಭೆ ಕಲಾಪದ ನೇರಪ್ರಸಾರ ವೀಕ್ಷಿಸಿ. 

ABOUT THE AUTHOR

...view details