Watch: ಬಿಎಂಟಿಸಿ ಬಸ್‌ಗೆ ಅಡ್ಡಬಂದ ಮರಿ ಚಿರತೆ ರಕ್ಷಣೆ: ವಿಡಿಯೋ - Leopard in Bengaluru - LEOPARD IN BENGALURU
Published : Apr 4, 2024, 8:52 AM IST
|Updated : Apr 4, 2024, 11:25 AM IST
ಬೆಂಗಳೂರು : ಬಿಎಂಟಿಸಿ ಬಸ್‌ಗೆ ಅಡ್ಡಲಾಗಿ ಬಂದು ಚಕ್ರದ ಬಳಿ ಅಡಗಿ ಕೂತಿದ್ದ 8 ತಿಂಗಳ ಚಿರತೆ ಮರಿಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ನಗರದ ಹೊರವಲಯದ ತುರಹಳ್ಳಿ ಅರಣ್ಯ ಪ್ರದೇಶದ ಸಮೀಪ ಬರುತ್ತಿದ್ದ ಕೆಂಗೇರಿ - ಚಿಕ್ಕೇಗೌಡನಪಾಳ್ಯ ಮಾರ್ಗದ ಬಿಎಂಟಿಸಿ ಬಸ್‌ಗೆ ಚಿರತೆ ಮರಿ ಅಡ್ಡ ಬಂದಿತ್ತು. ಇದನ್ನರಿತ ತಕ್ಷಣ ಚಾಲಕ ಬಸ್ ನಿಲ್ಲಿಸಿದ್ದಾರೆ. ಬಿಸಿಲಿನ ಝಳಕ್ಕೆ ಬಳಲಿದ್ದ ಚಿರತೆ ಮರಿ ಚಕ್ರದ ಬಳಿ ಅವಿತುಕೊಂಡಿತ್ತು. ಪ್ರಯಾಣಿಕರಿಗೆ ಬಸ್ನಿಂದ ಇಳಿಯದಂತೆ ಸೂಚಿಸಿದ ಬಳಿಕ ಚಾಲಕ ಮತ್ತು ನಿರ್ವಾಹಕರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಚಿರತೆ ಮರಿಯನ್ನು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಹೊಲಕ್ಕೆ ನುಗ್ಗಿದ ಚಿರತೆಯನ್ನು ಬೆನ್ನಟ್ಟಿ ಹಿಡಿದ ಗ್ರಾಮಸ್ಥರು
ಬಾವಿಗೆ ಬಿದ್ದ ಕರಿಚಿರತೆ ರಕ್ಷಣೆ: ಆಹಾರ ಅರಸಿ ಬಂದ ಕರಿಚಿರತೆಯೊಂದು ಬಾವಿಗೆ ಬಿದ್ದ ಘಟನೆ ಇತ್ತೀಚೆಗೆ ಮಂಗಳೂರು ನಗರದ ಹೊರವಲಯದ ಎಡಪದವು ಬಳಿಯ ಗೊಸ್ಪೆಲ್ ಸನಿಲ ಎಂಬಲ್ಲಿ ನಡೆದಿತ್ತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ಸಹಕಾರದಿಂದ ಹರಸಾಹಸಪಟ್ಟು ಕರಿಚಿರತೆಯನ್ನು ಸೆರೆಹಿಡಿದಿದ್ದರು.