ಎಸ್ಎಫ್ಐಯಿಂದ ಕಪ್ಪು ಬಾವುಟ ಪ್ರದರ್ಶನ; ರಸ್ತೆ ಬದಿ ಕುಳಿತು ಪ್ರತಿಭಟಿಸಿದ ಕೇರಳ ರಾಜ್ಯಪಾಲ - Kerala
By ANI
Published : Jan 28, 2024, 10:18 AM IST
ಕೊಲ್ಲಂ(ಕೇರಳ): ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಶನಿವಾರ ರಸ್ತೆಬದಿ ಕುಳಿತು ಪ್ರತಿಭಟನೆ ನಡೆಸಿರುವ ಘಟನೆ ನಡೆಯಿತು. ರಾಜ್ಯಪಾಲರು ಕಾರ್ಯಕ್ರಮವೊಂದಕ್ಕೆ ಕೊಟ್ಟಾರಕ್ಕರಕ್ಕೆ ತೆರಳುವ ವೇಳೆ ಎಸ್ಎಫ್ಐ (ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ) ಕಾರ್ಯಕರ್ತರು ಅವರ ಕಾರಿಗೆ ಕಪ್ಪು ಬಾವುಟ ತೋರಿಸಿದ್ದಲ್ಲದೆ ಪ್ರತಿಭಟನೆ ನಡೆಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಆರಿಫ್ ಮೊಹಮ್ಮದ್ ಕಾರಿನಿಂದ ಇಳಿದು ಕೊಲ್ಲಂನ ನಿಲಮೇಲ್ನಲ್ಲಿ ರಸ್ತೆಬದಿಯಲ್ಲಿ ಪ್ರತಿಭಟನೆ ನಡೆಸಿದರು. ತಮ್ಮ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ಸಂಬಾಳಿಸುವಲ್ಲಿ ಮತ್ತು ಅವರನ್ನು ಬಂಧಿಸದೇ ಇರುವ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ರಾಜ್ಯಪಾಲರಿಗೆ Z+ ಭದ್ರತೆ: ಈ ಘಟನೆಯ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯವು ರಾಜ್ಯಪಾಲರಿಗೆ ಸಿಆರ್ಪಿಎಫ್ನ Z+ ಭದ್ರತೆ ನೀಡಿದೆ. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಎಕ್ಸ್ ಹ್ಯಾಂಡಲ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. Z+ ಭದ್ರತೆಯನ್ನು ರಾಜ್ಯಪಾಲರು ಮತ್ತು ಕೇರಳ ರಾಜಭವನಕ್ಕೆ ವಿಸ್ತರಿಸಲಾಗುತ್ತಿದೆ ಎಂದು ಗೃಹ ಸಚಿವಾಲಯ ರಾಜಭವನಕ್ಕೆ ತಿಳಿಸಿದೆ.
ಇದನ್ನೂ ಓದಿ: ನಾಳೆ ಸಿಎಂ ಸ್ಥಾನಕ್ಕೆ ನಿತೀಶ್ಕುಮಾರ್ ರಾಜೀನಾಮೆ: ಬಿಜೆಪಿ ಜೊತೆ ಅಂದೇ ಸರ್ಕಾರ ರಚನೆ ಸಾಧ್ಯತೆ