ಕೊಪ್ಪಳದಲ್ಲಿ ಕನ್ನಡ ರಾಜ್ಯೋತ್ಸವ: ಬಸ್ನಲ್ಲಿ ಕನ್ನಡ ಗೀತೆ ಹಾಡಿ ಸಂಭ್ರಮಿಸಿದ ಕಂಡಕ್ಟರ್
Published : 5 hours ago
ಕೊಪ್ಪಳ: ರಾಜ್ಯಾದ್ಯಂತ 69ನೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಕಳೆಗಟ್ಟಿದೆ. ಇಂದು ಎಲ್ಲೆಡೆ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಜಿಲ್ಲೆಯ ಕುಕನೂರು ಪಟ್ಟಣದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಿಬ್ಬಂದಿ ಕರ್ನಾಟಕ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಿದ್ದಾರೆ. ರಾಜ್ಯೋತ್ಸವ ಅಂಗವಾಗಿ ಕುಕನೂರು ಬಸ್ ನಿಲ್ದಾಣದಲ್ಲಿ ಮೊದಲು ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಬಸ್ ನಿರ್ವಾಹಕ, ಚಾಲಕ ಮತ್ತು ಇತರ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಯಾಣಿಕರಿಗೆ ಬಸ್ ನಿರ್ವಾಹಕ ಅಶೋಕ್ ಭಂಗಿ ಅವರು ಕನ್ನಡದ ಶಾಲು ನೀಡಿ ಸ್ವಾಗತಿಸಿದರು. ಟಿಕೆಟ್ ವಿತರಿಸಿದ ಬಳಿಕ ನಿರ್ವಾಹಕ ಅಶೋಕ್ ಕನ್ನಡ ಹಾಡು ಹಾಡುವ ಜೊತೆಗೆ ಹಾಡಿಗೆ ತಕ್ಕಂತೆ ನೃತ್ಯ ಮಾಡಿ ಪ್ರಯಾಣಿಕರನ್ನು ರಂಜಿಸಿದರು. ನಂತರ ಬಸ್ನಲ್ಲಿದ್ದ ಪ್ರಯಾಣಿಕರಿಗೆ ಸಿಹಿ ಹಂಚಿ ಕನ್ನಡ ಪ್ರೇಮ ಮೆರೆದರು.
ಪ್ರಯಾಣಿಕರಿಂದ ಮೆಚ್ಚುಗೆ : ಕನ್ನಡ ಧ್ವಜ ಹಾಗೂ ವಿವಿಧ ಹೂವುಗಳಿಂದ ಸಾರಿಗೆ ಬಸ್ಅನ್ನು ಅಲಂಕಾರ ಮಾಡಲಾಗಿತ್ತು. ಇದನ್ನು ಕಂಡು ಬಸ್ನಲ್ಲಿದ್ದ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ: ಧ್ವಜಾರೋಹಣ ನೆರವೇರಿಸಿದ ಸತೀಶ ಜಾರಕಿಹೊಳಿ