ಕರ್ನಾಟಕ

karnataka

ETV Bharat / videos

LIVE: ವಿಧಾನಸಭೆ ಅಧಿವೇಶನದ ನೇರ ಪ್ರಸಾರ; ರಾಜ್ಯಪಾಲರ ಭಾಷಣದ ಮೇಲೆ ಉತ್ತರ ನೀಡುತ್ತಿರುವ ಸಿಎಂ - ಜ್ಞಾನದೇಗುಲ ಕೈ ಮುಗಿದು ಒಳಗೆ ಬಾ

By ETV Bharat Karnataka Team

Published : Feb 20, 2024, 10:44 AM IST

Updated : Feb 20, 2024, 1:25 PM IST

ಬೆಂಗಳೂರು: ರಾಜ್ಯ ವಿಧಾನಮಂಡಲದ ಅಧಿವೇಶನವು ಫೆಬ್ರವರಿ 12 ರಿಂದ ಆರಂಭವಾಗಿದ್ದು, ಫೆ.23ರವರೆಗೆ ನಡೆಯಲಿದೆ. ಫೆಬ್ರವರಿ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ 2024-25ನೇ ಸಾಲಿನ ಆಯವ್ಯಯ ಮಂಡಿಸಿದ್ದಾರೆ. ಇಂದು 7ನೇ ದಿನದ ಕಲಾಪ ನಡೆಯುತ್ತಿದೆ.

ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಹಾಕುವ 'ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ' ಘೋಷವಾಕ್ಯವನ್ನು 'ಜ್ಞಾನದೇಗುಲವಿದು ಧೈರ್ಯದಿಂದ ಪ್ರಶ್ನಿಸು' ಎಂದು ಬದಲಾಯಿಸಿರುವ ವಿಷಯ ಸೋಮವಾರ ವಿಧಾನಸಭೆ ಅಧಿವೇಶನದಲ್ಲಿ ಸದ್ದು ಮಾಡಿತು. ಇದು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ವಿಧಾನ ಪರಿಷತ್​​ನಲ್ಲೂ ಈ ವಿಚಾರ ಪ್ರತಿಧ್ವನಿಸಿ, ಬಿಜೆಪಿ ಸದಸ್ಯರು ಬಾವಿಗಿಳಿದು ಆಕ್ರೋಶ ಹೊರಹಾಕಿದರು.

ಪ್ರತಿಪಕ್ಷಗಳ ವಿರೋಧದ ಮಧ್ಯೆ ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ ಹಾಗೂ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕಗಳು ವಿಧಾನಸಭೆಯಲ್ಲಿ ಸೋಮವಾರ ಅಂಗೀಕೃತವಾಗಿವೆ. ಸರ್ಕಾರದಿಂದ ನೆರವು ಪಡೆದಿರುವ ಸಹಕಾರ ಮತ್ತು ಸೌಹಾರ್ದ ಸಹಕಾರಿ ಸಂಘಗಳಿಗೆ ರಾಜ್ಯ ಸರ್ಕಾರದಿಂದ ಮೂರು ಮಂದಿ ಪ್ರತಿನಿಧಿಗಳನ್ನು ನಾಮ ನಿರ್ದೇಶನ ಮಾಡಲು ಹಾಗೂ ನಾಮ ನಿರ್ದೇಶನದಲ್ಲೂ ಮೀಸಲಾತಿ ಕಲ್ಪಿಸುವ ವಿಧೇಯಕ ಇದಾಗಿದೆ. ಈ ತಿದ್ದುಪಡಿ ಬಿಲ್‌ನಿಂದಾಗಿ ಇನ್ನು ಮುಂದೆ ಸಹಕಾರ ಸಂಘಗಳ ಸಾಮಾನ್ಯ ಸಭೆಯಲ್ಲಿ ಭಾಗವಹಿಸದವರು ಯಾವುದೇ ವಹಿವಾಟು ನಡೆಸದವರೂ ಸೇರಿದಂತೆ ಎಲ್ಲಾ ಸದಸ್ಯರಿಗೂ ಮತದಾನ ಮಾಡಲು ಅನುಮತಿ ನೀಡಲಾಗಿದೆ. ಜತೆಗೆ ಸಹಕಾರ ಸಂಘಗಳ ಚುನಾವಣೆಗೆ ಇದ್ದ ಚುನಾವಣಾ ಪ್ರಾಧಿಕಾರ ರದ್ದು ಮಾಡಿ, ರಿಜಿಸ್ಟ್ರಾರ್‌ ನಿಯಂತ್ರಣದ ಅಡಿಯಲ್ಲಿ ಸಹಕಾರ ಚುನಾವಣಾ ವಿಭಾಗವನ್ನು ಸೃಜಿಸಲಾಗಿದೆ.

ಇದನ್ನೂ ಓದಿ: ಕಮಿಷನ್ ವಿಚಾರ: ಯತ್ನಾಳ್ - ಡಿಕೆಶಿ ಮಧ್ಯೆ ಪರಸ್ಪರ ಏಕವಚನದಲ್ಲೇ ವಾಕ್ ಸಮರ

Last Updated : Feb 20, 2024, 1:25 PM IST

ABOUT THE AUTHOR

...view details