ತಮಿಳುನಾಡು ರಾಜಕೀಯದಲ್ಲಿ ಕಮಲ್ ಹಾಸನ್ ದೊಡ್ಡ ಶಕ್ತಿ: ಡಿಕೆ ಶಿವಕುಮಾರ್ - ಡಿಕೆ ಶಿವಕುಮಾರ್
Published : Feb 19, 2024, 1:43 PM IST
ಬೆಂಗಳೂರು: ''ತಮಿಳುನಾಡು ರಾಜಕೀಯದಲ್ಲಿ ಮಕ್ಕಳ್ ನೀಧಿ ಮೈಯಂ ಅಧ್ಯಕ್ಷ ಕಮಲ ಹಾಸನ್ ಕೂಡ ಬಹಳ ದೊಡ್ಡ ಶಕ್ತಿಯಾಗಿದ್ದಾರೆ. ಜೊತೆಗೆ ನಮ್ಮ ಕಮಲ್ ನಾಥ್ ಬಗ್ಗೆಯೂ ಸಾಕಷ್ಟು ವದಂತಿಗಳಿವೆ'' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ್ ನೀಧಿ ಮೈಯಂ ಅಧ್ಯಕ್ಷ ಕಮಲ್ ಹಾಸನ್ ಕುರಿತು ಪ್ರತಿಕ್ರಿಯಿಸಿದರು. ''ಕಮಲ್ ನಾಥ್ ಅವರು ಮೌಲ್ಯಗಳು ಮತ್ತು ತತ್ವಗಳನ್ನು ಹೊಂದಿರುವ ವ್ಯಕ್ತಿ ಎಂದು ದಾಖಲೆಗಳ ಸಮೇತ ನಾನು ನಿಮಗೆ ತಿಳಿಸುತ್ತೇನೆ. ಅವರು ಕಾಂಗ್ರೆಸ್ ಬಿಟ್ಟು ಹೊರಗೆ ಹೋಗುವುದಿಲ್ಲ. ಇದು ವಿವಿಧ ರಾಜಕೀಯ ಪಕ್ಷಗಳು ಮತ್ತು ಬಿಜೆಪಿ ಸ್ನೇಹಿತರು ಹರಡಿರುವ ವದಂತಿಯಾಗಿದೆ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂ ಓದಿ: ಮಕ್ಕಳ ಮನಸಲ್ಲೂ ಸಂಘರ್ಷ ಉಂಟು ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲಾಗುತ್ತಿದೆ: ಬಸವರಾಜ ಬೊಮ್ಮಾಯಿ ಕಿಡಿ
ಕಮಲ್ ನಾಥ್ ಬಿಜೆಪಿ ಸೇರ್ಪಡೆ ಊಹಾಪೋಹ: ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಮಗೂ ಅವರ ಪುತ್ರ ನಕುಲ್ ನಾಥ್ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎನ್ನುವ ಊಹಾಪೋಹಗಳ ನಡುವೆಯೇ ಕಮಲ್ ನಾಥ್ಗೆ ನಿಷ್ಠರಾಗಿರುವ ಮಧ್ಯಪ್ರದೇಶದ ಸುಮಾರು ಆರು ಮಂದಿ ಶಾಸಕರು ಭಾನುವಾರ ದೆಹಲಿಗೆ ತಲುಪಿರುವ ಭಾರಿ ಕುತೂಹಲ ಕಾರಣವಾಗಿತ್ತು. ಈ ಶಾಸಕರ ಪೈಕಿ ಮೂವರು ಚಿಂದ್ವಾರದವರಾಗಿದ್ದಾರೆ ಎಂದು ಕಮಲನಾಥ್ ಅವರ ಆಪ್ತ ಮೂಲಗಳು ತಿಳಿಸಿವೆ.