ಕರ್ನಾಟಕ

karnataka

ETV Bharat / videos

ಉಡುಪಿ: 82ರ ಇಳಿ ವಯಸ್ಸಿನಲ್ಲೂ ಸಮರಕಲೆ ಪಟ್ಟು ಪ್ರದರ್ಶಿಸಿದ ಮೀನಾಕ್ಷಿ ಅಮ್ಮ - VIDEO - Kalaripayattu performance

By ETV Bharat Karnataka Team

Published : Jul 14, 2024, 9:21 PM IST

Updated : Jul 14, 2024, 9:35 PM IST

ಉಡುಪಿ: ಕಳರಿ ಪಯಟ್ಟು, ಇದು ಶರೀರವನ್ನೇ ಆಯುಧವಾಗಿ ಬಳಸುವ ಒಂದು ವಿಶೇಷ ಕಲೆ. ಇಂತಹ ಯುದ್ಧ ಕಲೆಯ ಪ್ರವೀಣೆ ಪದ್ಮಶ್ರೀ ಪುರಸ್ಕೃತೆ ಮೀನಾಕ್ಷಿ ಅಮ್ಮ. ವಯಸ್ಸು 82 ಆದರೂ ನವ ತರುಣಿಯಂತೆ ಮೀನಾಕ್ಷಿ ಅಮ್ಮ ಕಳರಿ ಪಯಟ್ಟು ಪ್ರಾತ್ಯಕ್ಷಿಕೆ ಮಾಡಿ ತೋರಿಸುತ್ತಾರೆ. 

ಜುಲೈ 13 ರಂದು ಉಡುಪಿಯ ಅದಮಾರು ಮಠದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಳರಿ ಸಮರಕಲೆ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನದಲ್ಲಿ ಮೀನಾಕ್ಷಿ ಅಮ್ಮ ಪಟ್ಟುಗಳ ಝಲಕ್ ತೋರಿಸಿದರು. ಜೊತೆಗೆ ತನ್ನ ಶಿಷ್ಯರ ಜೊತೆಗೂಡಿ ಲೀಲಾಜಾಲವಾಗಿ ಕಳರಿ ಸಮರಕಲೆಯ ಪಟ್ಟುಗಳನ್ನು ಪ್ರದರ್ಶಿಸಿದರು. ಇದಕ್ಕೂ ಮುನ್ನ ಇವರನ್ನು ಸನ್ಮಾನಿಸಲಾಯಿತು.

ಇಳಿವಯಸ್ಸಿನಲ್ಲಿಯೂ ಮೀನಾಕ್ಷಿ ಅಮ್ಮನ ಈ ಅದ್ಭುತ ಪ್ರದರ್ಶನ ಕಂಡು ಪ್ರೇಕ್ಷಕರು ಒಂದು ಕ್ಷಣ ಬೆರಗಾದರು. ಅವರ ಸಾಧನೆಯನ್ನು ನೆರೆದಿದ್ದ ಜನರು ಕೊಂಡಾಡಿದರು. 

ಬಳಿಕ ಮಾತನಾಡಿದ ಮೀನಾಕ್ಷಿ ಅಮ್ಮ, ಈ ಕಲೆಯನ್ನು ಎಲ್ಲರೂ ಅದರಲ್ಲೂ ಹೆಣ್ಣು ಮಕ್ಕಳು ಕರಗತ ಮಾಡಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ, ಹಿಂಸೆ ತಡೆಯಲು, ಸ್ವಯಂ ರಕ್ಷಣೆಗೆ ಸಹಾಯವಾಗುತ್ತದೆ. ಕೇರಳದಲ್ಲಿ ಈ ಕಲೆಯನ್ನು ಕಲಿಸುತ್ತಿದ್ದು, ಎಲ್ಲಾ ವಯೋಮಾನದವರು ಬರುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ :  ಕೇರಳ ಕಲೆಯ ಮೇಲೆ ವಿದೇಶಿಗನ ಪ್ರೀತಿ... ಲಾಕ್​ಡೌನ್​ನಿಂದ ‘ಕಳರಿ ಪಯಟ್ಟು’ ಕಲಿತ ಇಟಲಿ ಪ್ರಜೆ!

Last Updated : Jul 14, 2024, 9:35 PM IST

ABOUT THE AUTHOR

...view details