ಕರ್ನಾಟಕ

karnataka

ETV Bharat / videos

ಹಾವೇರಿ: ಕದರಮಂಡಲಗಿ ಕಾಂತೇಶ ಸ್ವಾಮಿ ಅದ್ಧೂರಿ ತೆಪ್ಪೋತ್ಸವ - KANTESH SWAMY THEPPOTSAVA

By ETV Bharat Karnataka Team

Published : Dec 9, 2024, 8:01 AM IST

ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಐತಿಹಾಸಿಕ ಕದರಮಂಡಲಗಿ ಕಾಂತೇಶ ಸ್ವಾಮಿ ತೆಪ್ಪೋತ್ಸವವು ಭಾನುವಾರ ಅದ್ಧೂರಿಯಾಗಿ ನಡೆಯಿತು. ದೇವಸ್ಥಾನದ ಪುಷ್ಕರಣೆಯಲ್ಲಿ ತೆಪ್ಪೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು. ಕಾಂತೇಶ ದೇವರ ಮೂರ್ತಿಯನ್ನು ತೆಪ್ಪದಲ್ಲಿಟ್ಟು ಪುಷ್ಕರಣಿಯಲ್ಲಿ ಐದು ಬಾರಿ ಪ್ರದಕ್ಷಿಣಿ ಹಾಕಲಾಯಿತು.

ತೆಪ್ಪೋತ್ಸವದಲ್ಲಿ ಪಾಲ್ಗೊಂಡ ಭಕ್ತರು ಗೋವಿಂದ ಗೋವಿಂದ.. ಎಂದು ಗೋವಿಂದನ ನಾಮಸ್ಮರಣೆ ಮಾಡಿದರು. ರಾಜ್ಯದ ವಿವಿಧಡೆಯಿಂದ ಆಗಮಿಸಿದ ಭಕ್ತರು ಕಾಂತೇಶನ ದರ್ಶನ ಪಡೆದು, ನಂತರ ತೆಪ್ಪೋತ್ಸವಲ್ಲಿ ಪಾಲ್ಗೊಂಡಿದ್ದರು. ವರ್ಷಕ್ಕೆ ಒಮ್ಮೆ ಕಾರ್ತಿಕಮಾಸದಲ್ಲಿ ನಡೆಯುವ ಕದರಮಂಡಲಗಿ ತೆಪ್ಪೋತ್ಸವವನ್ನು ಭಕ್ತರು ಕಣ್ತುಂಬಿಕೊಂಡರು.

ತೆಪ್ಪೋತ್ಸವದ ಅಂಗವಾಗಿ ಕಾಂತೇಶ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಪುಷ್ಕರಣಿಯನ್ನು ತಳಿರು ತೋರಣದಿಂದ ಅಲಂಕರಿಸಲಾಗಿತ್ತು. ತೆಪ್ಪ ಹಾಗೂ ಪುಷ್ಕರಣಿಗೆ ಮಾಡಿದ ವಿದ್ಯುತ್ ದೀಪಾಲಂಕಾರ ಕಣ್ಮನ ಸೆಳೆಯಿತು. 

ಇದನ್ನೂ ಓದಿ: ವರ್ಷದಲ್ಲಿ ಒಂದು ದಿನ ಮಾತ್ರ ಭಕ್ತರಿಗೆ ದರ್ಶನ ನೀಡುವ ದೇವಸ್ಥಾನ: ಎಲ್ಲಿದೆ ಗೊತ್ತಾ?

ಇದನ್ನೂ ಓದಿ: ಹಾವೇರಿ ಆಂಜನೇಯ ದೇವಸ್ಥಾನದ ಗರ್ಭಗುಡಿಯೊಳಗೆ ಮುಸಿಯಾ ಬಳಗ: ವಿಡಿಯೋ ವೈರಲ್​

ಇದನ್ನೂ ಓದಿ: ಭವ್ಯ ಇತಿಹಾಸ ಹೇಳುತ್ತಿದೆ ಇಲ್ಲಿನ ಭೂಗತ ಮಂದಿರ: ಏನು ಈ ದೇವಾಲಯದ ವಿಶೇಷ?

ABOUT THE AUTHOR

...view details