ನಂಜುಂಡೇಶ್ವರನಿಗೆ ಒಂದು ತಿಂಗಳಲ್ಲಿ 1.23 ಕೋಟಿ ರೂಪಾಯಿ ಕಾಣಿಕೆ: ಹುಂಡಿಯಲ್ಲಿ ಸಿಕ್ತು ಅಮೆರಿಕ, ಇಂಗ್ಲೆಂಡ್ ದೇಶಗಳ ಕರೆನ್ಸಿ - NANJUNDESHWARA HUNDI COUNTING
Published : Dec 27, 2024, 6:35 PM IST
ಮೈಸೂರು: ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡು ಶ್ರೀನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 1.23 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ.
ಒಂದು ತಿಂಗಳ ಅವಧಿಯಲ್ಲಿ 23 ಹುಂಡಿಗಳ ಎಣಿಕೆಯಲ್ಲಿ 1,23,59,270 ರೂಪಾಯಿ ದೊರೆತಿದೆ. 128 ಗ್ರಾಂ 800 ಮಿಲಿ ಗ್ರಾಂ ಚಿನ್ನ, 1 ಕೆ.ಜಿ 780 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ವಿದೇಶಿ ಕರೆನ್ಸಿಗಳೂ ದೊರೆತಿವೆ. ಅಮೆರಿಕದ 429, ಇಂಗ್ಲೆಂಡ್‌ನ 10, ಕೆನಡಾದ 15 ಮತ್ತು ಹಾಂಕಾಂಗ್ನನ 80 ಕರೆನ್ಸಿಗಳು ಕಾಣಿಕೆಯಾಗಿ ಬಂದಿವೆ.
ಇದನ್ನೂ ಓದಿ : ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರನಿಗೆ ₹1.12 ಕೋಟಿ ಕಾಣಿಕೆ - Nanjundeshwar Hundi Counting - NANJUNDESHWAR HUNDI COUNTING
ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ಸಹಾಯಕ ಅಧಿಕಾರಿ ವೆಂಕಟೇಶ್ ಪ್ರಸಾದ್, ವಿದ್ಯುಲತಾ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿದ್ದರು.
ಇದನ್ನೂ ಓದಿ : ದಸರಾ ರಜೆ: ಮಾದಪ್ಪನ ಹುಂಡಿಗೆ 28 ದಿನದಲ್ಲಿ ಹರಿದು ಬಂತು 2 ಕೋಟಿ ರೂ.ಕಾಣಿಕೆ - MADAPPA HUNDI