ದೇಶಾದ್ಯಂತ ಬಿಸಿಗಾಳಿ; ಉತ್ತರಾಖಂಡದಲ್ಲಿ ಭಾರಿ ಹಿಮಪಾತ - snowfall - SNOWFALL
Published : Apr 27, 2024, 8:02 PM IST
ಚಮೋಲಿ (ಉತ್ತರಾಖಂಡ): ದೇಶಾದ್ಯಂತ ಬಿಸಿಗಾಳಿ ಜೋರಾಗಿದೆ. ಹಲವು ರಾಜ್ಯಗಳಲ್ಲಿ ಬಿಸಿಗಾಳಿ, ಹೆಚ್ಚುತ್ತಿರುವ ತಾಪಮಾನದಿಂದಾಗಿ ಜನರ ಪರಿಸ್ಥಿತಿ ಹದಗೆಡುತ್ತಿದೆ. ಇದಕ್ಕೆ ವ್ಯತಿರಿಕ್ತ ಎಂಬಂತೆ ಉತ್ತರಾಖಂಡದ ಗಡಿ ಜಿಲ್ಲೆ ಚಮೋಲಿಯಲ್ಲಿ ಭಾರಿ ಹಿಮಪಾತವಾಗುತ್ತಿದೆ.
ಚಮೋಲಿ ಜಿಲ್ಲೆಯ ಎತ್ತರದ ಹಿಮಾಲಯ ಪ್ರದೇಶಗಳಲ್ಲಿ ಮೂರು-ನಾಲ್ಕು ದಿನಗಳಿಂದ ನಿರಂತರ ಹಿಮಪಾತ ಮತ್ತು ಬಲವಾದ ಗಾಳಿ ಇದೆ. ಇದರಿಂದ ದ್ರೋಣಗಿರಿಯಲ್ಲಿ ಸಾಕಷ್ಟು ಹಿಮ ಮಳೆ ಸುರಿಯುತ್ತಿದೆ. ಇದರ ಪರಿಣಾಮ ಗ್ರಾಮದ ಹಲವು ಮನೆಗಳಿಗೂ ಅಪಾರ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. ದ್ರೋಣಗಿರಿ ಗ್ರಾಮಾಂತರ ಮತ್ತು ಕಾಗಾ ಮುಖ್ಯಸ್ಥರು ಹಾಗೂ ಪ್ರಧಾನ ಸಂಘದ ಜಿಲ್ಲಾ ಮುಖ್ಯ ಕಾರ್ಯದರ್ಶಿ ಚಮೋಲಿ ಪುಷ್ಕರ್ ಸಿಂಗ್ ರಾಣಾ ಅವರು ಚಮೋಲಿ ಜಿಲ್ಲಾಧಿಕಾರಿ ಹಿಮಾಂಶು ಖುರಾನಾ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಮನೆಗಳ ಮೇಲೆ ಸುಮಾರು 2 ಅಡಿಗಳಷ್ಟು ಹಿಮ ಹೊದಿಕೆ ಆವರಿಸಿದೆ. ಮಂಜುಗಡ್ಡೆಗಳಿಂದ ಮನೆಗಳ ಛಾವಣಿಗಳಿಗೆ ಹಾನಿಯಾಗಿದೆ. ಅಲ್ಲದೇ, ದ್ರೋಣಗಿರಿಗೆ ತಲುಪಲು ಇರುವ ಏಕೈಕ ಕಾಲುದಾರಿ ಕೂಡ ಅತಿಯಾದ ಹಿಮಪಾತದಿಂದಾಗಿ ಹಲವೆಡೆ ಹಾನಿಯಾಗಿದೆ. ಆದ್ದರಿಂದ ಹಾಳಾಗಿರುವ ರಸ್ತೆಗಳನ್ನು ಸಂಬಂಧಪಟ್ಟ ಇಲಾಖೆಯಿಂದ ದುರಸ್ತಿ ಮಾಡಿಸಬೇಕು. ಮನೆ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ತೆಲಂಗಾಣ, ಒಡಿಶಾ, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳದಲ್ಲಿ 5 ದಿನ ತೀವ್ರ ಬಿಸಿಗಾಳಿ