ಕರ್ನಾಟಕ

karnataka

ಹಾವೇರಿಯಲ್ಲಿ ಧಾರಾಕಾರ ಮಳೆ; ಪರದಾಡಿದ ಸವಾರರು - Haveri Rain

By ETV Bharat Karnataka Team

Published : Aug 21, 2024, 11:04 PM IST

ಹಾವೇರಿಯಲ್ಲಿ ಧಾರಾಕಾರ ಮಳೆ (ETV Bharat)

ಹಾವೇರಿ: ನಗರದಲ್ಲಿ ಒಂದು ಗಂಟೆ ಕಾಲ ಧಾರಾಕಾರ ಮಳೆ ಸುರಿದಿದೆ. ನಿರಂತರವಾಗಿ‌ ಸುರಿದ ಮಳೆಗೆ ಹಾವೇರಿ ಪ್ರವಾಸಿ ಮಂದಿರದ ಮುಂದಿನ ರಸ್ತೆ ಕೆಲಕಾಲ ಕೆರೆಯಂತಾಗಿತ್ತು. 

ಹಾವೇರಿ ಹುಬ್ಬಳ್ಳಿ ಸಂಪರ್ಕಿಸುವ ಹಳೆ ಪಿ. ಬಿ. ರಸ್ತೆಯಲ್ಲಿ ನೀರು ತುಂಬಿ ಹರಿಯಿತು. ಹಾವೇರಿ ಎಸ್ಪಿ ಕಚೇರಿ‌ ಪ್ರವಾಸಿ ಮಂದಿರ ಮುಂದಿನ ರಸ್ತೆ ಕೆರೆಯಂತಾಗಿತ್ತು.

ಮಳೆ ನೀರಿಂದ ರಸ್ತೆ ಮುಚ್ಚಿ ಸವಾರರಿಗೆ ರಸ್ತೆ ಯಾವುದು ಗುಂಡಿ ಯಾವುದು ಎಂದು ಗೊತ್ತಾಗದೆ, ಕೆಲಕಾಲ ಪರದಾಡಿದರು. ಮಳೆ ನೀರಿನಿಂದ ವಾಹನಗಳ ಅರ್ಧ ಭಾಗ ಮುಳುಗಡೆಯಾಗಿ ಸಂಚಾರದಲ್ಲಿ ವ್ಯತ್ಯಯವಾಗಿತ್ತು.

ಆಕ್ರೋಶ ವ್ಯಕ್ತಪಡಿಸಿದ ವಾಹನ ಸವಾರರು: ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ಮೇಲೆ ಮಳೆ ನೀರು ನಿಂತು ಪಾದಚಾರಿಗಳು ಸಹ ಪರದಾಡಿದರು. ವಾಹನ ಸವಾರರು‌ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿನ ರಾಜಕಾಲುವೆ ಮೇಲೆ ಮನೆಗಳನ್ನು ಕಟ್ಟಿಕೊಂಡಿದ್ದೆ ಈ ಅವಾಂತರಕ್ಕೆ ಕಾರಣ ಎಂದು ಪ್ರಯಾಣಿಕರು ಆರೋಪಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ: 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ - Karnataka Rain Alert

ABOUT THE AUTHOR

...view details