ಕರ್ನಾಟಕ

karnataka

ETV Bharat / videos

ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ: ಮನೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ - Chikkamagaluru Rains

By ETV Bharat Karnataka Team

Published : Jun 6, 2024, 10:37 PM IST

ಚಿಕ್ಕಮಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಬಿಡುವು ನೀಡಿದ್ದ ಮಳೆ ಇಂದು ಧಾರಾಕಾರವಾಗಿ ಸುರಿಯಿತು. ಚಿಕ್ಕಮಗಳೂರು ನಗರದ ಟೀಚರ್ಸ್ ಕಾಲೊನಿ ರಸ್ತೆಯಲ್ಲಿ ನದಿಯಂತೆ ನೀರು ಹರಿಯಿತು. ಹಳ್ಳದಂತಾದ ಕಾಲೊನಿಯ ರಸ್ತೆಗಳನ್ನು ನೋಡಿ ಜನರು ಮನೆಯಿಂದ ಹೊರ ಬರುವುದಕ್ಕೂ ಭಯಪಡುವಂತಾಗಿತ್ತು.  

ಸಂಜೆ ಸುರಿದ ಮಳೆಯಿಂದ ರಸ್ತೆಯಲ್ಲೇ ಹಳ್ಳ ಸೃಷ್ಟಿಯಾಗಿದೆ. ಹುಣಸೇಹಳ್ಳಿ ಕೆರೆಗೆ ಹೋಗುವ ಭಾರೀ ಪ್ರಮಾಣದ ನೀರು ನೇರವಾಗಿ ತಗ್ಗು ಪ್ರದೇಶದಲ್ಲಿರುವ ಕಾಲೋನಿಗೆ ನುಗ್ಗಿತು. ಇದರಿಂದಾಗಿ ಜನ ಜೀವನಕ್ಕೆ ತೊಂದರೆಯಾಗಿದೆ. 

ಮಲೆನಾಡು ಭಾಗವಾದ ಮೂಡಿಗೆರೆ, ಕಳಸ, ಹೊರನಾಡು, ಶೃಂಗೇರಿ, ಕೊಪ್ಪ, ಬಾಳೆಹೊನ್ನೂರಿನಲ್ಲಿ ನಿರಂತರ ಮಳೆ ಸುರಿದಿದೆ. ಹೀಗಾಗಿ, ಭದ್ರಾ ಹಾಗೂ ತುಂಗಾ ನದಿಯ ಹರಿವಿನ ಮಟ್ಟದಲ್ಲಿ ಹೆಚ್ಚಳ ಕಂಡುಬರುತ್ತಿದೆ. ಅನೇಕ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಕಂಡುಬಂದಿದ್ದು, ಜನ ಕತ್ತಲಲ್ಲೇ ಜೀವನ ಮಾಡುವಂತಾಗಿದೆ.

ಇತ್ತೀಚಿಗೆ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು.

ಇದನ್ನೂ ಓದಿ: ಮುಂಗಾರು ಮಳೆ ರಾಜ್ಯದಲ್ಲಿ ಮತ್ತಷ್ಟು ಚುರುಕು; 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ - RAIN IN KARNATAKA

ABOUT THE AUTHOR

...view details