ಕರ್ನಾಟಕ

karnataka

ETV Bharat / videos

ಉತ್ತರಕಾಶಿಯ ಗಂಗೋತ್ರಿ ಹೆದ್ದಾರಿಯಲ್ಲಿ ಭೂಕುಸಿತ: ವಿಡಿಯೋ - Gangotri Highway

By ETV Bharat Karnataka Team

Published : Mar 14, 2024, 9:35 PM IST

ಉತ್ತರಕಾಶಿ (ಉತ್ತರಾಖಂಡ) : ಇಲ್ಲಿನ ಗಂಗೋತ್ರಿ ಹೆದ್ದಾರಿ ಬಳಿ ಭಾರಿ ಭೂಕುಸಿತ ಸಂಭವಿಸಿದೆ. ಈ ದೃಶ್ಯವನ್ನ ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿದ್ದಾರೆ. ಮಾಹಿತಿ ಪಡೆದ ಬಿಆರ್‌ಒ ತಂಡ ಸ್ಥಳಕ್ಕೆ ಭೇಟಿ ನೀಡಿದೆ.

ಗಂಗೋತ್ರಿ ಹೆದ್ದಾರಿಯಲ್ಲಿ ಭೂಕುಸಿತ : ''ಈ ಹಿಂದೆ ಇಲ್ಲಿ ಮಳೆ, ಹಿಮಪಾತವಾಗುತ್ತಿತ್ತು. ಅದೃಷ್ಟವಶಾತ್ ಭೂಕುಸಿತ ಸಂಭವಿಸಿದಾಗ ಯಾವುದೇ ವಾಹನ ಅಥವಾ ಪಾದಚಾರಿ ಹೆದ್ದಾರಿಯಲ್ಲಿ ಹಾದು ಹೋಗಿಲ್ಲ. ಇಲ್ಲದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಗುಡ್ಡದಿಂದ ದಿಢೀರ್ ಭೂಕುಸಿತ ಉಂಟಾಗಿದೆ. ಇದರಿಂದಾಗಿ ಗಂಗೋತ್ರಿ ಹೆದ್ದಾರಿ ಬಂದ್ ಆಗಿದೆ. ಈ ಬಗ್ಗೆ ಬಿಆರ್‌ಒಗೆ ಮಾಹಿತಿ ನೀಡಲಾಗಿದ್ದು, ಬಿಆರ್​ಒ ತಂಡ ಹೆದ್ದಾರಿಯನ್ನು ತೆರೆಯಲು ಪ್ರಯತ್ನಿಸುತ್ತಿದೆ'' ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ದೇವೇಂದ್ರ ಪಟ್ವಾಲ್ ಅವರು ತಿಳಿಸಿದ್ದಾರೆ.

ಭೂಕುಸಿತಕ್ಕೆ ಸೂಕ್ಷ್ಮ ಉತ್ತರಕಾಶಿ : ಉತ್ತರಾಖಂಡದ ಉತ್ತರಕಾಶಿ ದೇಶದ ಗಡಿ ಜಿಲ್ಲೆ ಎಂಬುದು ಗಮನಾರ್ಹ. ಈ ಜಿಲ್ಲೆಯ ಕೊನೆಯಲ್ಲಿ ಚೀನಾ ಆಕ್ರಮಿಸಿಕೊಂಡಿರುವ ಟಿಬೆಟ್‌ನ ಗಡಿ ಇದೆ. ಉತ್ತರಕಾಶಿ ಜಿಲ್ಲೆ ಭೂಕುಸಿತ ವಲಯವಾಗಿದೆ. ಮಳೆಗಾಲದಲ್ಲಿ ನಿತ್ಯ ಇಲ್ಲಿ ಭೂಕುಸಿತಗಳು ಸಂಭವಿಸುತ್ತಲೇ ಇರುತ್ತವೆ. ಈ ಬಾರಿ ಮಳೆಗಾಲಕ್ಕೂ ಮುನ್ನವೇ ಭೂಕುಸಿತ ಉಂಟಾಗಿದ್ದು, ಚಾರ್ಧಾಮ್ ಯಾತ್ರೆಗೆ ಸಿದ್ಧತೆ ನಡೆಸಿರುವ ಯಾತ್ರಿಗಳಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಉತ್ತರಕಾಶಿಯ 57 ಗ್ರಾಮಗಳು ಭೂಕುಸಿತದ ಭೀತಿಯಲ್ಲಿವೆ. 1997ರಲ್ಲಿ ಜಿಲ್ಲೆಯ ದುಂಡಾ ತಹಸಿಲ್‌ನ ಬಾಗಿ ಗ್ರಾಮವು ಭೂಕುಸಿತದಿಂದ ಸಂಪೂರ್ಣವಾಗಿ ನಾಶವಾಗಿತ್ತು. 2003ರಲ್ಲಿ ವರುಣಾವತ್ ಪರ್ವತದ ಭೂಕುಸಿತವನ್ನು ಅತ್ಯಂತ ಭೀಕರ ಭೂಕುಸಿತ ಎಂದು ಪರಿಗಣಿಸಲಾಗಿದೆ. 2010ರಲ್ಲಿ ಭಟವಾಡಿ ಗ್ರಾಮದಲ್ಲಿ ಭೂಕುಸಿತದಿಂದ 50 ಮನೆಗಳು ಹಾನಿಗೀಡಾಗಿದ್ದವು.

ಇದನ್ನೂ ಓದಿ : ಉತ್ತರಕಾಶಿಯಲ್ಲಿ ಮಳೆಯಿಂದ ನಿರಂತರವಾಗಿ ಭೂ ಕುಸಿತ: ಗಂಗೋತ್ರಿ ಹೆದ್ದಾರಿ ಬಂದ್

ABOUT THE AUTHOR

...view details