ಕರ್ನಾಟಕ

karnataka

ETV Bharat / videos

ಕಾಲೆಳೆದವರ ತಲೆ ಮೇಲೆ ಕಾಲಿಟ್ಟು ಮೇಲೆ ಬರ್ತಿನಿ : ಮಾಜಿ ಸಂಸದ ಪ್ರತಾಪ್ ಸಿಂಹ - FORMER MP PRATAP SIMHA

By ETV Bharat Karnataka Team

Published : Jan 5, 2025, 10:50 PM IST

ಚಾಮರಾಜನಗರ : ಒಂದಲ್ಲ‌ ಒಂದು ದಿನ ನನ್ನ ಕಾಲೆಳೆದವರ ತಲೆ ಮೇಲೆ ಕಾಲಿಟ್ಟು ಮೇಲೆ ಬರ್ತಿನಿ ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಗುಡುಗಿದ್ದಾರೆ.

ಕೊಳ್ಳೇಗಾಲದ ಖಾಸಗಿ ಕಲ್ಯಾಣ ಮಂಟಪದಲ್ಲಿ ದೇವಾಂಗ ಸಂಘವು ಆಯೋಜಿಸಿದ್ದ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದ ಅವರು, ಮೈಸೂರು ಸಂಸದನಾಗಿ 10 ವರ್ಷಗಳ‌ ಕಾಲ ಉತ್ತಮ‌ ಕೆಲಸ ಮಾಡಿದೆ. ಯಾವ ಕಾಂಟ್ರಾಕ್ಟರ್ ಹತ್ತಿರವೂ ಕೈ ಚಾಚಲಿಲ್ಲ. ಯಾವ ರಿಯಲ್ ಎಸ್ಟೇಟ್ ಕೂಡ ಮಾಡಲಿಲ್ಲ. ಆದರೆ, ರಾಜಕಾರಣದಲ್ಲಿ ಒಮ್ಮೊಮ್ಮೆ ಒಳ್ಳೆಯನತಕ್ಕೆ ಮನ್ನಣೆ ಸಿಗುವುದಿಲ್ಲ ಎಂದರು.

ರಾಜಕಾರಣದಲ್ಲಿ ಕೆಲವೊಮ್ಮೆ ಕಾಲೆಳೆಯುವವರ ಕೈ ಮೇಲಾಗುತ್ತದೆ.‌ ನನಗೆ ಈಗ ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗಿದೆ. ಆದರೆ, ನನ್ನ ರಕ್ತದಲ್ಲೇ ಹೋರಾಟದ ಗುಣ ಇದೆ, ಕಷ್ಟಪಟ್ಟು ಮೇಲೆ ಬಂದವನು ನಾನು. ಒಂದಲ್ಲ‌ ಒಂದು ದಿನ ಕಾಲೆಳೆದವರ ತಲೆ ಮೇಲೆ ಕಾಲಿಟ್ಟು ಮೇಲೆ ಬರ್ತಿನಿ‌ ನೋಡಿ ಎಂದು ಹೇಳಿದರು.

ಇದನ್ನೂ ಓದಿ : ನಾನು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ: ಮಾಜಿ ಸಂಸದ ಪ್ರತಾಪ್‌ ಸಿಂಹ ಸ್ಪಷ್ಟನೆ - PRATAP SIMHA

ABOUT THE AUTHOR

...view details