ಹರಿಯಾಣ: ರೈಲು ಕಂಪಾರ್ಟ್ಮೆಂಟ್ನಲ್ಲಿ ಬೆಂಕಿ - Fire in Train Compartment
Published : Mar 17, 2024, 8:35 AM IST
ಅಂಬಾಲಾ: ಹರಿಯಾಣದ ಅಂಬಾಲಾ ರೈಲು ನಿಲ್ದಾಣದ ಸಮೀಪ ಇರಿಸಲಾಗಿದ್ದ ರೈಲಿನ ಕಂಪಾರ್ಟ್ಮೆಂಟ್ನಲ್ಲಿ ಇದ್ದಕ್ಕಿದ್ದಂತೆ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡು ಬೋಗಿ ಹೊತ್ತಿ ಉರಿಯಿತು. ಶನಿವಾರ ಈ ಘಟನೆ ನಡೆದಿದೆ. ಹಳಿಗಳ ರಿಪೇರಿ ಮತ್ತು ಪರಿಶೀಲನೆ ನಡೆಸುವ ರೈಲ್ವೇ ನೌಕರರಿಗಾಗಿ ಈ ಬೋಗಿಯನ್ನು ಇರಿಸಲಾಗಿತ್ತು. ಕಂಪಾರ್ಟ್ಮೆಂಟ್ನಲ್ಲಿ ಅಡುಗೆಗೆಂದು ಇಟ್ಟಿದ್ದ ಮೂರು ಗ್ಯಾಸ್ ಸಿಲಿಂಡರ್ಗಳ ಪೈಕಿ ಒಂದು ಸೋರಿಕೆಯಾಗಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆ ಇಡೀ ಬೋಗಿಗೆ ಹರಡಿ ಸುಟ್ಟು ಕರಕಲಾಗಿದೆ.
ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕಾಗಮಿಸಿದ್ದವು. ಬೆಂಕಿ ನಂದಿಸಲು ಸಿಬ್ಬಂದಿ ಹರಸಾಹಸಪಟ್ಟಿದ್ದು ಸುಮಾರು ಒಂದು ಗಂಟೆ ಶ್ರಮಿಸಿ ಹತೋಟಿಗೆ ತರಲಾಯಿತು. ಘಟನೆಯ ವೇಳೆ ಬೋಗಿಯಲ್ಲಿ ಯಾರೂ ಇರದ ಕಾರಣ ದೊಡ್ಡ ದುರಂತ ತಪ್ಪಿದೆ.
ಈ ಹಿಂದೆ 2019ರಂದು ಬಟಿಂಡಾ-ಅಂಬಾಲಾ ರೈಲಿನ ಸಾಮಾನ್ಯ ಪ್ರಯಾಣದ ಬೋಗಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿ ಸುಟ್ಟು ಕರಕಲಾಗಿತ್ತು. ರೈಲ್ವೇ ಇಲಾಖೆಗೆ 5 ಲಕ್ಷ ರೂ. ನಷ್ಟ ಉಂಟಾಗಿತ್ತು.
ಇದನ್ನೂ ಓದಿ: ರಾಯಚೂರು: ಆಕಸ್ಮಿಕ ಬೆಂಕಿಯಿಂದ ಮೇವಿನ ಬಣವೆಗಳು ಸುಟ್ಟು ಕರಕಲು