ಕರ್ನಾಟಕ

karnataka

ETV Bharat / videos

ಉಳ್ಳಾಲದಲ್ಲಿ ಅಗ್ನಿ ಅವಘಡ: ಹಣ್ಣುಹಂಪಲು ಅಂಗಡಿಗಳು ಭಸ್ಮ, ಕೋಟ್ಯಂತರ ರೂ. ನಷ್ಟ - Fire accident - FIRE ACCIDENT

By ETV Bharat Karnataka Team

Published : Jun 10, 2024, 1:38 PM IST

ಉಳ್ಳಾಲ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪು ಬಳಿಯಿರುವ ಗ್ಲೋಬಲ್ ಮಾರುಕಟ್ಟೆಯಲ್ಲಿ ಬೆಂಕಿ ಅವಘಢ ಸಂಭವಿಸಿದ್ದು, 5 ದೊಡ್ಡ ಹಾಗೂ 20 ಸಣ್ಣ ಅಂಗಡಿಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ. ಇದರಿಂದ ವ್ಯಾಪಾರಸ್ಥರಿಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ.

ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯಲ್ಲಿನ ನವೀದ್ ಮಾಲೀಕತ್ವದ ಎಸ್.ಎನ್.ಫ್ರೂಟ್ಸ್ ಅಂಗಡಿಗೆ 1 ಕೋಟಿ ರೂಪಾಯಿ ನಷ್ಟ, ಸುಹೈಲ್ ಎಂಬವರಿಗೆ ಸೇರಿದ ಕೆಎಫ್​ಕೆ ಅವರಿಗೆ 40 ಲಕ್ಷ ರೂಪಾಯಿ ನಷ್ಟ, ಲತೀಫ್ ಎಂಬವರಿಗೆ ಸೇರಿದ ಕೆ.ಕೆ.ಫ್ರೂಟ್ಸ್ ಅಂಗಡಿಗೆ 70 ಲಕ್ಷ ರೂಪಾಯಿ ನಷ್ಟ, ಇಂಡಿಯನ್ ಅಂಡಿಗೆ 60 ಲಕ್ಷ ರೂ. ನಷ್ಟ, ಸಲಾಂ ಅವರ ಬಿ.ಎಸ್.ಆರ್ ಅಂಗಡಿಗೆ 15 ರಿಂದ 20 ಲಕ್ಷ ರೂ. ನಷ್ಟ, ಝುಲ್ಫೀಕರ್ ಅವರ ಪಿಕೆಎಸ್ ಅಂಗಡಿಗೆ 15-20 ಲಕ್ಷ ರೂಪಾಯಿ ನಷ್ಟ, ನಾಸೀರ್ ಎಂಬವರ ಕೆಜಿಎನ್ ಫ್ರೂಟ್ಸ್ ಅಂಗಡಿಗೆ 15-20 ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅದರ ಹತ್ತಿರದಲ್ಲಿರುವ ಸಣ್ಣ ಅಂಗಡಿಗಳಾದ ಗಣೇಶ್ ಮಾರ್ಕೆಟ್, ಇಮ್ತಿಯಾಝ್, ಅಮೀರ್ ಸೇರಿದಂತೆ ಒಟ್ಟು 20 ಅಂಗಡಿಗಳು ಸುಟ್ಟುಹೋಗಿವೆ. 

ಎಸ್.ಎನ್.ಫ್ರೂಟ್ಸ್ ಮಾಲೀಕರು ಭಾನುವಾರ ಸಂಜೆ ವೇಳೆಯಷ್ಟೇ ರೂ. 40 ಲಕ್ಷದ ಹಣ್ಣುಹಂಪಲುಗಳನ್ನು ಮಾರಾಟಕ್ಕೆ ತರಿಸಿದ್ದರು. ಎಲ್ಲಾ ಮಳಿಗೆಗಳಲ್ಲಿ ಫ್ರಿಝರ್​ಗಳಿದ್ದು, ಅವುಗಳೂ ಸುಟ್ಟುಹೋಗಿವೆ. ರಾತ್ರಿ 2.30ರ ಸುಮಾರಿಗೆ ಬೀಗ ಹಾಕಿದ್ದ ಅಂಗಡಿಗಳ ಒಳಗಿನಿಂದ ಬೆಂಕಿ ಕಾಣಿಸಿಕೊಂಡಿದ್ದು, ಒಮ್ಮಿಂದೊಮ್ಮೆಲೇ 25 ಅಂಗಡಿಗಳಿಗೂ ವ್ಯಾಪಿಸಿದೆ. ಮಂಗಳೂರಿನಿಂದ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ಕೈಗೊಂಡ ಹಿನ್ನೆಲೆಯಲ್ಲಿ ಉಳಿದ 60 ಅಂಗಡಿಗಳಿಗೆ ಬೆಂಕಿ ಹರಡುವುದು ತಪ್ಪಿದೆ. ಇಂದು ಶಾಸಕ ಯು.ಟಿ.ಖಾದರ್​ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ಇದನ್ನೂ ನೋಡಿ: ಗಂಗಾವತಿ: ಮಹೀಂದ್ರಾ ಶೋರೂಂಗೆ ಬೆಂಕಿ; 5 ಟ್ರ್ಯಾಕ್ಟರ್​ ಸೇರಿ ಅಪಾರ ಹಾನಿ - Tractors Fire

ABOUT THE AUTHOR

...view details