ಕರ್ನಾಟಕ

karnataka

ETV Bharat / videos

ತುಂಗಭದ್ರಾ ಜಲಾಶಯದ ರಮಣೀಯ ನೋಟ ಡ್ರೋನ್​ ಕ್ಯಾಮೆರಾದಲ್ಲಿ ಸೆರೆ: ನೋಡಿ - Tungabhadra Dam - TUNGABHADRA DAM

By ETV Bharat Karnataka Team

Published : Jul 30, 2024, 10:09 AM IST

ಕೊಪ್ಪಳ: ತುಂಗಭದ್ರಾ ಅಣೆಕಟ್ಟೆಯ ವಿಹಂಗಮ ನೋಟ ಡ್ರೋನ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಐತಿಹಾಸಿಕ, ಧಾರ್ಮಿಕ ತಾಣ ಗಂಗಾವತಿ ತಾಲೂಕಿನ ಆನೆಗೊಂದಿಯ ವಿಜಯನಗರ ದೊರೆ ಶ್ರೀಕೃಷ್ಣದೇವರಾಯನ ಸಮಾಧಿ ಎಂದು ಹೇಳಲಾಗುವ 64 ಕಂಬಗಳ ಮಂಟಪ ಮುಳುಗಡೆಯಾಗಿದೆ. 

ಆನೆಗುಂದಿ ಬಳಿ ಇರುವ ತುಂಗಭದ್ರಾ ನದಿಯ ಮಧ್ಯದಲ್ಲಿರುವ ನವ ವೃಂದಾವನ ಸುತ್ತಲೂ ನೀರು ಸುತ್ತುವರೆದಿದೆ. ಕಡೆಬಾಗಿಲು ಸಮೀಪ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ನೋಡಲು ಜನರು ಆಗಮಿಸುತ್ತಿದ್ದು, ಜಲಾಶಯದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. 

ಜಲಾಶಯದ 33 ಕ್ರಸ್ಟ್​ಗೇಟ್​ಗಳ ಮೂಲಕ ಒಂದೂವರೆ ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ. ಹೀಗಾಗಿ ನದಿ ಪಾತ್ರದಲ್ಲಿನ ಗ್ರಾಮಗಳ ಜಮೀನು, ತೋಟ, ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ.

ಗ್ರಾಮಗಳ ಜನವಸತಿ ಪ್ರದೇಶಕ್ಕೂ ಕೂಡ ನೀರು ಆವರಿಸುವ ಭೀತಿ ಉಂಟಾಗಿದೆ. ಕೊಪ್ಪಳ ಜಿಲ್ಲಾಧಿಕಾರಿ ನಲೀನ್ ಅತುಲ್, ನದಿ ಪಾತ್ರದಿಂದ 100 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜನ, ಜಾನುವಾರು ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ.

ಇದನ್ನೂ ಓದಿ: ತಗ್ಗಿದ ಕಾವೇರಿ ಹೊರಹರಿವು: ಪ್ರವಾಹ ಅಪಾಯದಿಂದ ಗ್ರಾಮಗಳು ಪಾರು - Cauvery River

ABOUT THE AUTHOR

...view details