ಬಳ್ಳಾರಿ ಸೆಂಟ್ರಲ್ ಜೈಲ್ಗೆ ಸ್ಥಳಾಂತರಗೊಳ್ಳಲಿರುವ ದರ್ಶನ್: ಕಾರಾಗೃಹಕ್ಕೆ ಭೇಟಿ ಕೊಟ್ಟ ಎಸ್ಪಿ - SP Visits Ballary Jail - SP VISITS BALLARY JAIL
Published : Aug 28, 2024, 4:17 PM IST
|Updated : Aug 28, 2024, 7:45 PM IST
ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಸೆಂಟ್ರಲ್ ಜೈಲ್ಗೆ ಸ್ಥಳಾಂತರಗೊಳಿಸಲಾಗುತ್ತಿದೆ. ಈ ಹಿನ್ನೆಲೆ ಕಾರಾಗೃಹಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭರಾಣಿ ದಿಢೀರ್ ಭೇಟಿ ನೀಡಿದರು.
ಆರೋಪಿ ದರ್ಶನ್ನನ್ನು ಮಧ್ಯಾಹ್ನ ಶಿಫ್ಟ್ ಮಾಡುವ ಸೂಚನೆ ದೊರೆತ ಹಿನ್ನೆಲೆ, ಜೈಲಿಗೆ ಆಗಮಿಸಿ ಇಲ್ಲಿನ ಪರಿಸ್ಥಿತಿ ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಜೈಲಿನ ಸೆಲ್ಗಳ ಪರಿಸ್ಥಿತಿ, ಆರೋಪಿಗಳ ಸಂಖ್ಯೆ, ವಿವರ ಹಾಗೂ ಹೊರ ಭದ್ರತಾ ವಿಭಾಗದಲ್ಲಿನ ಸೆಲ್ಗಳ ಮಾಹಿತಿ ಪಡೆದರು. ಆರೋಪಿ ದರ್ಶನ್ನನ್ನು ಶಿಫ್ಟ್ ಮಾಡುವ ಸೆಲ್, ಅಲ್ಲಿನ ಸ್ಥಿತಿಗತಿ, ಸಿಸಿ ಕ್ಯಾಮರಾಗಳ ಕಣ್ಗಾವಲು ಸೇರಿ ಸೂಕ್ತ ಭದ್ರತೆ ಇರುವ ಬಗ್ಗೆ ಪರಿಶೀಲನೆ ನಡೆಸಿದರು.
ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ ಬಳ್ಳಾರಿ ಎಸ್ಪಿ ಶೋಭರಾಣಿ, ''ಬಳ್ಳಾರಿಗೆ ಬರೋ ಬಗ್ಗೆ ಇನ್ನೂ ಯಾವುದೇ ಡೈರೆಕ್ಷನ್ ಬಂದಿಲ್ಲ. ನಮಗೆ ಈವರೆಗೂ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ವಿಚಾರಣಾಧೀನ ಕೈದಿಗಳ ಬ್ಯಾರಕ್ನಲ್ಲೇ ದರ್ಶನ್ ಅವರನ್ನೂ ಇರಿಸಲಾಗುತ್ತದೆ. ಆದೇಶ ಬಂದಮೇಲೆ ಏನೇನು ಮಾಡ್ಬೇಕೋ ಅದನ್ನು ಮಾಡುತ್ತೇವೆಂದು ತಿಳಿಸಿದರು.
ನ್ಯಾಯಾಂಗ ಬಂಧನ ಮುಂದುವರಿಕೆ: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 9ರ ವರೆಗೆ ವಿಸ್ತರಿಸಲಾಗಿದೆ.
ಇದನ್ನೂ ಓದಿ: ದರ್ಶನ್ ನ್ಯಾಯಾಂಗ ಬಂಧನ ವಿಸ್ತರಣೆ: ಬಳ್ಳಾರಿ ಜೈಲಿಗೆ ಸ್ಥಳಾಂತರ ಹಿನ್ನೆಲೆ ಬಿಗಿ ಬಂದೋಬಸ್ತ್ - DARSHAN JUDICIAL CUSTODY