ಸಿಎಂ ಸಿದ್ದರಾಮಯ್ಯರಿಂದ ಬಜೆಟ್ ಮಂಡನೆ: ನೇರ ಪ್ರಸಾರ - ಸಿಎಂ ಸಿದ್ದರಾಮಯ್ಯ
Published : Feb 16, 2024, 10:17 AM IST
|Updated : Feb 16, 2024, 1:36 PM IST
ಬೆಂಗಳೂರು: 14 ಬಾರಿ ಬಜೆಟ್ ಮಂಡಿಸಿ ದಾಖಲೆ ಮಾಡಿರುವ ಸಿಎಂ ಸಿದ್ದರಾಮಯ್ಯ ಇಂದು ತಮ್ಮ 15ನೇ ಆಯವ್ಯಯವನ್ನು ಮಂಡಿಸುತ್ತಿದ್ದಾರೆ. ಈ ಬಾರಿ ಬಜೆಟ್ ಪ್ರತಿಗಳನ್ನು ಸರ್ಕಾರಿ ಸ್ವಾಮ್ಯದ ಲೀಡ್ಕರ್ ಸಂಸ್ಥೆಯ ಬ್ಯಾಗ್ನಲ್ಲಿ ಸಿಎಂ ತೆಗೆದುಕೊಂಡು ಬಂದು, ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಈವರೆಗೆ ಸೂಟ್ಕೇಸ್ನಲ್ಲಿ ಬಜೆಟ್ ಪ್ರತಿ ತರುತ್ತಿದ್ದರು.
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಸಿಎಂ ಭೇಟಿ ಮಾಡಿದ ಬಳಿಕ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಬಜೆಟ್ 2024 ಅನುಮೋದನೆ ಪಡೆದರು. ಬಳಿಕ ವಿಧಾನಸಭೆಗೆ ಆಗಮಿಸಿದರು. 10.15ರಿಂದ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಈ ಬಾರಿ ಗ್ಯಾರಂಟಿ ಯೋಜನೆಗೆ ಅನುದಾನ ಹೊಂದಿಸಿ, ಅಭಿವೃದ್ಧಿಗೂ ಹಣಕಾಸು ಕೊರತೆಯಾಗದ ರೀತಿ ಹೊರೆ ಇಲ್ಲದ ಉಳಿತಾಯ ಲೆಕ್ಕ ಪತ್ರ ಮಂಡನೆ ಮಾಡುವ ಸಾಧ್ಯತೆ ಇದೆ.
ಪ್ರಮುಖವಾಗಿ ಪಂಚ ಗ್ಯಾರಂಟಿಗಳಿಗೆ ಅನುದಾನ ಒದಗಿಸುವ ಜೊತೆಗೆ ಆದಾಯ ಸಂಗ್ರಹದ ಪರ್ಯಾಯ ಮಾರ್ಗೋಪಾಯಗಳೊಂದಿಗೂ ಮುಂಗಡ ಪತ್ರವನ್ನು ಮಂಡಿಸಲಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆ ಈ ಬಾರಿ ರಾಜ್ಯದ ಜನರಿಗೆ ತೆರಿಗೆ ಹೊರೆ ಇಲ್ಲದ, ಅಭಿವೃದ್ಧಿಗೂ ಒತ್ತು ನೀಡುವ ಸಮತೋಲಿತ ಬಜೆಟ್ ಮಂಡನೆಯಾಗಲಿದೆ ಎಂದು ಹೇಳಲಾಗಿದೆ.