ಕಾಲರಾ ಆತಂಕ: ಕೈ ತೊಳೆದುಕೊಳ್ಳುವಾಗ ಈ 5 ಕ್ರಮ ಅನುಸರಿಸುವುದು ಕಡ್ಡಾಯ- ವಿಡಿಯೋ - Cholera Prevention
Published : Sep 22, 2024, 8:17 AM IST
ಮಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಾಲರಾ ಪ್ರಕರಣಗಳು ಪತ್ತೆಯಾಗುತ್ತಿವೆ. ಕಲುಷಿತ ಆಹಾರ, ನೀರು ಸೇವನೆ ಮತ್ತು ಸ್ವಚ್ಛತೆಯ ಕೊರತೆ ಇರುವಲ್ಲಿ ಈ ರೋಗ ಹರಡುತ್ತದೆ. ಆದ್ದರಿಂದ ಸ್ವಚ್ಛತೆ ಬಹಳ ಮುಖ್ಯ. ಅದರಲ್ಲೂ ಊಟಕ್ಕೆ ಮುನ್ನ ಹಾಗೂ ಶೌಚಾಲಯಕ್ಕೆ ಹೋಗಿ ಬಂದ ಬಳಿಕ ಶುದ್ಧವಾಗಿ ಕೈ ತೊಳೆಯಬೇಕು. ಸರಿಯಾದ ಕ್ರಮದಲ್ಲಿ ಕೈ ತೊಳೆದುಕೊಳ್ಳುವುದರಿಂದ ವಾಂತಿ, ಭೇದಿಯನ್ನು ನಿಯಂತ್ರಿಸಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ತಿಳಿಸಿದ್ದಾರೆ.
ಕೈ ತೊಳೆಯವುದು ಬಹಳ ಪ್ರಮುಖ ವಿಷಯ. ಸುಮ್ಮನೆ ನೀರಲ್ಲಿ ತೊಳೆದುಕೊಳ್ಳುವುದರಿಂದ ಸ್ವಚ್ಛವಾಗಲ್ಲ. ಅದಕ್ಕೂ ಒಂದು ಕ್ರಮವಿದೆ. ಕ್ರಮಬದ್ಧವಾಗಿ ತೊಳೆದರೆ ಮಾತ್ರ ಕೈಗಳು ಸ್ವಚ್ಛವಾಗುತ್ತವೆ. ಮೊದಲು ವಾಚ್, ಉಂಗುರುವನ್ನು ಬಿಚ್ಚಿ ಕೈ ನೆನೆಸಿಕೊಳ್ಳಬೇಕು. ಬಳಿಕ ಸೋಪು ಹಚ್ಚಿಕೊಂಡು ನೊರೆ ಬರುವ ಹಾಗೆ ಉಜ್ಜಿಕೊಳ್ಳಬೇಕು. ಆನಂತರ ಕೈಗಳ ಎರಡೂ ಕಡೆ ಹಿಂಬದಿ ಮತ್ತು ಉಗುರುಗಳನ್ನು ಸರಿಯಾಗಿ ತೊಳೆದುಕೊಳ್ಳಬೇಕು ಎಂದು ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.