ಸಂಸತ್ತಿನ ಬಜೆಟ್ ಅಧಿವೇಶನ: ನೇರಪ್ರಸಾರ - ಬಜೆಟ್ ಅಧಿವೇಶನದ ನೇರ ಪ್ರಸಾರ
Published : Jan 31, 2024, 11:04 AM IST
|Updated : Jan 31, 2024, 12:52 PM IST
ನವದೆಹಲಿ: ಹಾಲಿ ಕೇಂದ್ರ ಸರ್ಕಾರದ ಕೊನೆಯ ಅಧಿವೇಶನವೂ ಆಗಿರುವ ಸಂಸತ್ತಿನ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುವುದರೊಂದಿಗೆ ಕಲಾಪಗಳು ಆರಂಭವಾಗಲಿವೆ.
ನಾಳೆ ಬಜೆಟ್ ಮಂಡನೆಯಾಗಲಿದೆ. ಈ ವರ್ಷ ಲೋಕಸಭೆ ಚುನಾವಣೆ ನಡೆಯಲಿದ್ದು, ಇರುವ ಅವಧಿಗೆ ಯೋಜನೆಗಳಿಗೆ ಅನುದಾನ ಪಡೆಯಲು ಮಂಡಿಸುವ ಮಧ್ಯಂತರ ಬಜೆಟ್ ಇದಾಗಿದೆ. ಲೋಕಸಭೆಗೆ ಚುನಾವಣೆ ನಡೆದ ಬಳಿಕ ಅಧಿಕಾರಕ್ಕೆ ಬರುವ ಸರ್ಕಾರ ಜೂನ್ ಅಥವಾ ಜುಲೈನಲ್ಲಿ ಪೂರ್ಣ ಬಜೆಟ್ ಮಂಡಿಸಲಿದೆ.
ನಾಳೆ ಮಂಡನೆಯಾಗುವ ಮಧ್ಯಂತರ ಬಜೆಟ್ ಹಣಕಾಸಿನ ವರ್ಷದ ಆರಂಭಿಕ ತಿಂಗಳುಗಳಿಗೆ ಮಾತ್ರ ಅನ್ವಯವಾಗಿರುತ್ತದೆ. ಅಂದರೆ, 2024ರ ಏಪ್ರಿಲ್ನಿಂದ ಜೂನ್‌ವರೆಗಿನ ಸಿಬ್ಬಂದಿ ವೇತನ ಮತ್ತು ಇತರ ಅಗತ್ಯ ವೆಚ್ಚಗಳನ್ನು ನಿಭಾಯಿಸುವ ಸಲುವಾಗಿ ಈ ಆಯವ್ಯಯ ಇರಲಿದೆ.
ಬಜೆಟ್ ಅಧಿವೇಶನ ಫೆಬ್ರವರಿ 9ರವರೆಗೆ ನಡೆಯಲಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಹಣಕಾಸುವ ಸಚಿವೆ ನಿರ್ಮಲಾ ಸೀತಾರಾಮನ್ ಆಯವ್ಯಯ ಮಂಡಿಸುವರು.
ಇದನ್ನೂ ಓದಿ: ಕೇಂದ್ರ ಬಜೆಟ್: ಲೋಕ ಸಮರದ ಹೊಸ್ತಿಲಲ್ಲಿ ರಾಜ್ಯಕ್ಕೆ ಸಿಗುವುದೇ ಭರಪೂರ ಕೊಡುಗೆ?