ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಬ್ರಹ್ಮರಥೋತ್ಸವ; ಹಂಬಿನಿಂದ ತೇರು ಎಳೆದ ಭಕ್ತರು - Himavad Gopalaswamy Hills - HIMAVAD GOPALASWAMY HILLS
Published : Apr 4, 2024, 8:19 PM IST
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಗುರುವಾರ ವಿಜೃಂಭಣೆಯಿಂದ ಬ್ರಹ್ಮರಥೋತ್ಸವ ನಡೆಯಿತು.
ಗೋಪಾಲಪುರ ಗ್ರಾಮಸ್ಥರು ಕಾಡಿನಲ್ಲಿ ಸಿಗುವ ಒತ್ತರದ ಹಂಬುಗಳನ್ನು ತಂದು ಹಗ್ಗ ತಯಾರಿಸುತ್ತಾರೆ. ಹೊನ್ನೇಗೌಡನಹಳ್ಳಿ ಗ್ರಾಮಸ್ಥರು ತೇರಿಗೆ ಬೇಕಾದ ಬೊಂಬುಗಳನ್ನು ತಂದು ರಥ ಸಿದ್ಧಪಡಿಸುತ್ತಾರೆ. ಸಾವಿರಾರು ಭಕ್ತರು ಈ ಹಂಬಿನಿಂದ ರಥ ಎಳೆಯುವುದು ಇಲ್ಲಿನ ವಿಶೇಷತೆ.
ಭಕ್ತರು ದೇವರ ದರ್ಶನ ಪಡೆಯಲು ಅನುಕೂಲವಾಗುವಂತೆ ಬೆಟ್ಟದ ತಪ್ಪಲಿನಿಂದ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಬೇಸಿಗೆ ಸಮಯವಾದ್ದರಿಂದ ಕಾಡ್ಗಿಚ್ಚಿನಂಥ ಅಹಿತಕರ ಘಟನೆಗಳು ನಡೆಯದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರು.
ಬಂಡಿಪುರ ರಾಷ್ಟ್ರೀಯ ಉದ್ಯಾನದ ಅತೀ ಎತ್ತರದ ಶಿಖರವಾಗಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ ವರ್ಷದ ಎಲ್ಲ ಸಮಯದಲ್ಲೂ ಮಂಜಿನಿಂದ ಕೂಡಿರುತ್ತದೆ. ಇಲ್ಲಿನ ನೈಸರ್ಗಿಕ ವಿಸ್ಮಯ ನೋಡಲು ರಾಜ್ಯವಲ್ಲದೆ, ದೇಶದ ವಿವಿಧ ಭಾಗಗಳಿಂದಲೂ ಜನ ಬರುತ್ತಾರೆ. ಬೆಟ್ಟದ ಮೇಲೆ ಹೋಗಲು ಸರ್ಕಾರಿ ಬಸ್ಗಳ ವ್ಯವಸ್ಥೆ ಇದ್ದು, ಖಾಸಗಿ ವಾಹನಗಳ ಪ್ರವೇಶ ಮತ್ತು ಸಂಚಾರವನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ಗೋಪಾಲಸ್ವಾಮಿ ಬೆಟ್ಟದಲ್ಲಿ ದಿಢೀರ್ ಕಾಡಾನೆ ಎಂಟ್ರಿ: ಸೆಲ್ಫಿಗೆ ಮುಗಿಬಿದ್ದ ಪ್ರವಾಸಿಗರು