LIVE: ಬಿಎಸ್ವೈ, ಸದಾನಂದ ಗೌಡ ಸೇರಿ ಬಿಜೆಪಿ ನಾಯಕರಿಂದ ಸುದ್ದಿಗೋಷ್ಟಿ - BJP Press Meet - BJP PRESS MEET
Published : Apr 21, 2024, 11:24 AM IST
|Updated : Apr 21, 2024, 11:40 AM IST
ಬೆಂಗಳೂರು: ಕಾಂಗ್ರೆಸ್ ಜಾಹೀರಾತುಗಳಿಗೆ ಟಕ್ಕರ್ ಕೊಡಲು ಬಿಜೆಪಿ ಮುಂದಾಗಿದೆ. ಬಿಜೆಪಿಯ ಮೂವರು ಮಾಜಿ ಸಿಎಂಗಳು ಇಂದು ಮಹತ್ವದ ಸುದ್ದಿಗೋಷ್ಟಿ ಕರೆದಿದ್ದಾರೆ. ಬೆಂಗಳೂರಿನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದ ಗೌಡ ಸೇರಿ ಬಿಜೆಪಿ ನಾಯಕರು ಸರ್ಕಾರದ ವೈಫಲ್ಯಗಳನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸುತ್ತಿದ್ದಾರೆ.ಮೋದಿ ಸರ್ಕಾರದ ವಿರುದ್ಧ ಚೊಂಬು ಜಾಹೀರಾತನ್ನು ರಾಜ್ಯ ಕಾಂಗ್ರೆಸ್ ವಿವಿಧ ದಿನಪತ್ರಿಕೆಗಳಲ್ಲಿ ನೀಡಿತ್ತು. ಈ ಸಂಬಂಧ ಮೂವರು ಮಾಜಿ ಸಿಎಂಗಳು ಕಾಂಗ್ರೆಸ್ ವಿರುದ್ಧ ತಿರುಗೇಟು ನೀಡುತ್ತಿದ್ದಾರೆ. ಇದರ ಜೊತೆಗೆ ರಾಜ್ಯದಲ್ಲಿ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ, ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣವನ್ನು ಉಲ್ಲೇಖಿಸಿ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಹಾಗೆಯೇ ನಿನ್ನೆ ದೇವೇಗೌಡರು ಪ್ರಧಾನಿ ಮುಂದೆ ಕಾಂಗ್ರೆಸ್ನ ಚೊಂಬು ಜಾಹೀರಾತಿನ ಪತ್ರಿಕೆಯನ್ನು ಓದುತ್ತಿರುವ ಫೋಟೋವನ್ನು ಸಿಎಂ ಸಿದ್ದರಾಮಯ್ಯ ವಿಡಂಬನಾತ್ಮಕವಾಗಿ ಮೂದಲಿಸಿ ಎಕ್ಸ್ ಪೋಸ್ಟ್ ಮೂಲಕ ಟಾಂಗ್ ನೀಡಿದ್ದರು. ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದ ನರೇಂದ್ರ ಮೋದಿ ಅವರ ಪ್ರಯಾಣದ ಮಾರ್ಗದಲ್ಲಿ ಚೊಂಬು ಪ್ರದರ್ಶಿಸಲು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹ್ಯಾರಿಸ್ ನಲಪಾಡ್ ಯತ್ನಿಸಿದ್ದ ಘಟನೆ ನಿನ್ನೆ ಬೆಂಗಳೂರಲ್ಲಿ ನಡೆದಿದೆ.
Last Updated : Apr 21, 2024, 11:40 AM IST