ಚಾಮರಾಜನಗರದಲ್ಲಿ ಬಂಡಿ ಜಾತ್ರೆ: ಇಷ್ಟಾರ್ಥ ಸಿದ್ಧಿಗೆ ಚಕ್ರಕ್ಕೆ ತೆಂಗಿನಕಾಯಿ ಒಡೆದ ಭಕ್ತರು
Published : Jan 22, 2024, 9:02 AM IST
ಚಾಮರಾಜನಗರ: ಜಾತ್ರೆ ಅಂದಾಕ್ಷಣ ನೆನಪಾಗುವುದು ರಥ ಮತ್ತು ಇಷ್ಟಾರ್ಥ ಈಡೇರಿಕೆಗಾಗಿ ಎಸೆಯುವ ಉತ್ತತ್ತಿ, ಹಣ್ಣುಗಳು. ಆದರೆ, ಈ ಜಾತ್ರೆಯಲ್ಲಿ ಬಂಡಿಗಳದ್ದೇ ಕಲರವ. ಚಕ್ರಕ್ಕೆ ತೆಂಗಿನಕಾಯಿ ಒಡೆಯುವುದು ಇಲ್ಲಿನ ವಿಶೇಷತೆ. ಚಾಮರಾಜನಗರ ತಾಲೂಕಿನ ಕಸ್ತೂರು ಎಂಬ ಗ್ರಾಮದಲ್ಲಿ 16 ಗ್ರಾಮಗಳ ಜನರು ಬಂಡಿ ಜಾತ್ರೆ ನಡೆಸಿದರು.
ಹೆಸರೇ ಹೇಳುವಂತೆ ಇಲ್ಲಿ ಬಂಡಿಗಳದ್ದೇ ಕಾರುಬಾರು. ನಾನಾ ರೀತಿಯಲ್ಲಿ ಅಲಂಕೃತಗೊಂಡ ಬಂಡಿಗಳನ್ನು ಇಲ್ಲಿ ನೋಡಬಹುದು. ರಂಗುರಂಗಿನ ಬಟ್ಟೆ, ನಾನಾ ಬಗೆಯ ಹೂವು, ಬಾಳೆಗೊನೆ ಹೀಗೆ ವಿವಿಧ ರೀತಿಯಲ್ಲಿ ಬಂಡಿಗಳು ಶೃಂಗಾರಗೊಂಡಿದ್ದವು. ಸಹಸ್ರಾರು ಜನ ಸಂಭ್ರಮದಿಂದ ಜಾತ್ರೆಯಲ್ಲಿ ಪಾಲ್ಗೊಂಡು, ಕಸ್ತೂರು ದೊಡ್ಡಮ್ಮತಾಯಿಗೆ ಪೂಜೆ ಸಲ್ಲಿಸಿ ನಮಿಸಿದರು.
ಸಾಮಾನ್ಯವಾಗಿ ರಥೋತ್ಸವಗಳಲ್ಲಿ ಹಣ್ಣು ಜವನ ಎಸೆಯುವುದು ವಾಡಿಕೆ. ಆದರೆ, ಇಲ್ಲಿ ತಮ್ಮ ದನಕರುಗಳಿಗೆ ಯಾವುದೇ ರೋಗ ರುಜಿನಗಳು ಬಾರದೇ ಇರಲಿ ಎಂದು ಹರಕೆ ಹೊತ್ತ ರೈತರು, ಇಷ್ಟಾರ್ಥ ಸಿದ್ಧಿಗಾಗಿ ಚಕ್ರಗಳಿಗೆ ತೆಂಗಿನಕಾಯಿ ಒಡೆಯುತ್ತಾರೆ. ಕಸ್ತೂರು, ಮರಿಯಾಲ, ಭೋಗಾಪುರ, ಕೆಲ್ಲಂಬಳ್ಳಿ, ಬಸವನಪುರ ತೊರವಳ್ಳಿ ಸೇರಿದಂತೆ ಹದಿನಾರು ಹಳ್ಳಿಗಳ ಬಂಡಿಗಳ ಉತ್ಸವ ನಡೆದಿದೆ.
ಇದನ್ನೂ ಓದಿ: ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ: ಹೀಗಿದೆ ಕಾರ್ಯಕ್ರಮದ ಸಂಪೂರ್ಣ ವಿವರ