ಕರ್ನಾಟಕ

karnataka

ETV Bharat / videos

ಯುವತಿಗೆ ವೈಯಕ್ತಿಕ ವಿಡಿಯೋ ಕಳುಹಿಸಿ ಹಣ ಸುಲಿಗೆ‌ ಮಾಡಿದ್ದ ಆರೋಪಿ ಬಂಧನ - extorted money from young woman - EXTORTED MONEY FROM YOUNG WOMAN

By ETV Bharat Karnataka Team

Published : Mar 21, 2024, 8:30 PM IST

ಬೆಂಗಳೂರು: ಪರಿಚಯಸ್ಥ ಯುವತಿಗೆ ವೈಯಕ್ತಿಕ ವಿಡಿಯೋ, ಫೋಟೋ ಕಳುಹಿಸಿ 1.28 ಲಕ್ಷ ಹಣ ಸುಲಿಗೆ ಮಾಡಿದ್ದನ್ನು  ಪ್ರಶ್ನಿಸಿದ್ದಕ್ಕೆ ಕುಖ್ಯಾತ ಡಾನ್ ದಾವೂದ್ ಇಬ್ರಾಹಿಂ, ಛೋಟಾ ಶಕೀಲ್ ಪರಿಚಯವಿದ್ದು, ಹತ್ಯೆ ಮಾಡಿಸುವುದಾಗಿ ಬೆದರಿಸಿದ್ದ ಯುವಕನನ್ನು ಭಾರತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಫಾನ್ ಅಹಮ್ಮದ್ ಎಂಬ ಆರೋಪಿಯನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಮದುವೆ ಸಮಾರಂಭವೊಂದರಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ, ಕಾಲ ಕ್ರಮೇಣ ಅವಳೊಂದಿಗೆ ಸಲುಗೆ ಬೆಳೆಸಿಕೊಂಡಿದ್ದನು. ಕೆಲ ದಿನಗಳ ಇಬ್ಬರು ಓಡಾಡಿಕೊಂಡಿದ್ದರು. ಈ ವೇಳೆ, ಯುವತಿಗೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋ ಕಳುಹಿಸಿ ಪದೇ ಪದೆ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಭೇಟಿಯಾಗಿಲ್ಲವೆಂದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದನು.

ಹಣ ಕೊಡದಿದ್ದರೆ ವಾಟ್ಸ್​ಆ್ಯಪ್​​ನಲ್ಲಿ ಕಳುಹಿಸಿದ್ದ ವೈಯಕ್ತಿಕ ವಿಡಿಯೊ ಹಾಗೂ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದನು.‌ ಇದಕ್ಕೆ ಹೆದರಿದ್ದ ಯುವತಿ 1.28 ಲಕ್ಷ ಹಣ ನೀಡಿದ್ದಳು. ಬ್ಲಾಕ್​ಮೇಲ್ ಮಾಡಿ ಹಣ ಸುಲಿಗೆ ಮಾಡಿರುವ ಬಗ್ಗೆ ಯುವತಿ ಸಹೋದರರಿಗೆ ಗೊತ್ತಾಗಿ ಆರೋಪಿ ಮನೆಗೆ ಹೋಗಿ ಪ್ರಶ್ನಿಸಿದ್ದರು.‌

ಈ ವೇಳೆ ಅಸಮಾಧಾನಗೊಂಡ ಅಫಾನ್, ನಮ್ಮ‌ ತಂದೆಗೆ ಅಂತಾರಾಷ್ಟ್ರೀಯ ಡಾನ್​​ಗಳಾದ ದಾವೂದ್ ಇಬ್ರಾಹಿಂ, ಛೋಟಾ ಶಕೀಲ್  ಹತ್ತಿರದವರಾಗಿದ್ದು, ನಿಮ್ಮ ಕುಟುಂಬಸ್ಥರನ್ನು ಹತ್ಯೆ ಮಾಡುವುದಾಗಿ ಹೆದರಿಸಿದ್ದನು. ಇದರಿಂದ ಯುವತಿ ಕುಟುಂಬ ಭಯಭೀತಗೊಂಡಿತ್ತು. ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

ಇದನ್ನೂಓದಿ:ಬೆಂಗಳೂರು: ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ರೈಲಿಗೆ ಸಿಲುಕಿ ವ್ಯಕ್ತಿ ಆತ್ಮಹತ್ಯೆ - A MAN COMMITTED SUICIDE
 

ABOUT THE AUTHOR

...view details