ಹುಡುಗಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಅಪರಿಚಿತ ಮುಸುಕುಧಾರಿ ಯುವಕ - Girl brutal murder - GIRL BRUTAL MURDER
Published : Jun 8, 2024, 2:31 PM IST
|Updated : Jun 8, 2024, 3:08 PM IST
ಮೊಹಾಲಿ (ಪಂಜಾಬ್): ಹುಡುಗಿಯ ಮೇಲೆ ಅಪರಿಚಿತ ಯುವಕರು ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಪಂಜಾಬ್ ಮೊಹಾಲಿ 5ನೇ ಹಂತದ ಪ್ರದೇಶದಲ್ಲಿ ಬಳಿ ನಡೆದಿದೆ. ದಾಳಿಕೋರನ ಕ್ರೌರ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ದಾಳಿಯ ನಂತರ ಗಂಭೀರವಾಗಿ ಗಾಯಗೊಂಡಿದ್ದ ಹುಡುಗಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಕೆಲವು ಹೊತ್ತನ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಹಾಡಹಗಲೇ ಕೊಲೆ: ಮೃತ ಹುಡುಗಿ ಫತೇಘರ್ ಸಾಹಿಬ್ ಪ್ರದೇಶದ ನಿವಾಸಿಯಾಗಿದ್ದಾಳೆ. ಮೊಹಾಲಿಯ 5 ನೇ ಹಂತದ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಹೇಳಲಾಗುತ್ತಿದೆ. ಮೊಹಾಲಿಯಂತಹ ಹೈ ಸೆಕ್ಯುರಿಟಿ ಸಿಟಿಯಲ್ಲಿ ಹಗಲು ಹೊತ್ತಿನಲ್ಲೇ ನಡೆದಿರುವ ಈ ಹತ್ಯೆ ಮತ್ತೊಮ್ಮೆ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಜನರು ಚಿಂತೆಗೆ ಈಡಾಗಿದ್ದಾರೆ. ಜನ ಸಾಮಾನ್ಯರಲ್ಲಿ ಸೌಹಾರ್ದತೆಯ ವಾತಾವರಣ ಇರುವ ಕಡೆ ಪೊಲೀಸರು ಹಾಗೂ ಸರ್ಕಾರದ ಕಾರ್ಯವೈಖರಿ ಬಗ್ಗೆಯೂ ಜನ ಪ್ರಶ್ನೆ ಮೂಡಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ಕೊಲೆ ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.